ಕಟಾಯಿ ಚಿಕನ್
ಬೇಕಾಗುವ ಸಾಮಗ್ರಿಗಳು
*ಚಿಕನ್ – ೧/೨ ಕೆ.ಜಿ
*ತುಪ್ಪ – ೨ ಚಮಚ
*ಪಲಾವ್ ಎಲೆ – ೧
*ಈರುಳ್ಳಿ – ೧
*ಅರಿಶಿಣ – ೧/೨ ಚಮಚ
*ಟೊಮೆಟೋ – ೧
*ಟೊಮೆಟೋ ಕ್ಯೂರಿ – ೧ ಕಪ್
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಗರಂ ಮಸಾಲ – ೧ ಚಮಚ
*ಧನಿಯಾ ಕಾಳು – ೨
*ಮೆಣಸು- ೮-೧೦ ಕಾಳು
*ಜೀರಿಗೆ – ೧/೨ ಚಮಚ
*ಖಾರದ ಪುಡಿ – ೪ ಚಮಚ
*ಎಣ್ಣೆ – ೧೦೦ ಮಿ.ಲೀ
*ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಬಾಣಲಿಗೆ ಧನಿಯಾ, ಮೆಣಸು, ಜೀರಿಗೆ ಹಾಖಿ ಹದವಾಗಿ ಹುರಿದು ಕೊಳ್ಳಿ. ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಂಡು ಮಾಡಿಟ್ಟುಕೊಳ್ಳಿ. ಮತ್ತು ಟೊಮೆಟೋ ರುಬ್ಬಿ ಪ್ಯೂರಿ ಮಾಡಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ. ಕಾದ ನಂತರ ತುಪ್ಪ, ಪಲಾವ್ ಎಲೆ, ಈರುಳ್ಳಿ ಹಾಕಿ ಕೆಂಪಗಾಗುವವರೆಗು ಉರಿದು ಇದಕ್ಕೆ ಅರಿಶಿಣ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಇದಕ್ಕೆ ರುಬ್ಬಿದ ಟೊಮೆಟೋ ಪ್ಯೂರಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈಯಾಡಿಸಿ. ನಂತರ ೨ ಸ್ಪೂನ್ ರುಬ್ಬಿದ ಪುಡಿ ಹಾಕಿ, ಕೊನೆಯಲ್ಲಿ ಅಚ್ಚಖಾರದ ಪುಡಿ, ಗರಂ ಮಸಾಲ, ಚಿಕನ್, ರುಚಿಗೆ ಬೇಕಾದಷ್ಟು ಉಪ್ಪು ಮತ್ತು ನೀರು ಹಾಕಿ ಚೆನ್ನಾಗಿ ಬೆರೆಸಿ. ಮುಚ್ಚಳ ಮುಚ್ಚಿ ಬೇಯಲು ಬಿಡಿ. ಬೆಂದ ನಂತರ ಶುಂಠಿ ಪೀಸ್, ಕೊತ್ತಂಬರಿ ಸೊಪ್ಪು ಹಾಕಿದರೆ ಕಡಾಯಿ ಚಿಕನ್ ರೆಡಿ.