ಮಟನ್ ರೋಗನ್ ಜೋಶ್
ಬೇಕಾಗುವ ಸಾಮಗ್ರಿಗಳು
*ಮಟನ್ – ೧/೪ ಕೆ.ಜಿ
*ಕಾಶ್ಮೀರಿ ಚಿಲ್ಲಿ ಪೌಡರ್ – ೧ ಚಮಚ
*ಒಣ ಶುಂಠಿ – ೧/೨ ಚಮಚ
*ಜಾಪತ್ರೆ – ೧
*ಮೊಸರು – ೧/೪ ಕಪ್
*ಈರುಳ್ಳಿ ಪೇಸ್ಟ್ – ೧ ಚಮಚ
*ಟೊಮೆಟೊ ಪ್ಯೂರಿ – ೨ ಚಮಚ
*ಧನಿಯಾ ಪುಡಿ – ೨ ಚಮಚ
*ಚಕ್ಕೆ – ೨
*ಲವಂಗ -೨
*ಏಲಕ್ಕಿ -೨
*ಸೋಂಪು ಪೌಡರ್ – ೧/೨ ಚಮಚ
*ಅರಿಶಿಣ – ೧ ಚಮಚ
*ತುಪ್ಪ – ೪ ಚಮಚ
*ಇಂಗು – ೧/೪ ಚಮಚ
*ಎಣ್ಣೆ – ೧೦೦ ಮಿ.ಲೀ
ಮಾಡುವ ವಿಧಾನ :
ಕುಕ್ಕರ್‌ಗೆ ತುಪ್ಪ, ಎಣ್ಣೆ ಹಾಕಿ. ಕಾದ ಮೇಲೆ ಜಾಪತ್ರೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಘಮ ಬರುವವರೆಗೆ ಹುರಿಯಿರಿ. ನಂತರ ಈರುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿ. ಇದಕ್ಕೆ ಇಂಗು, ಮಟನ್ ಪೀಸ್‌ಗಳನ್ನು ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೂ ಕೈ ಯಾಡಿಸಿ. ಆಮೇಲೆ ಅರಿಶಿಣ, ಕಾಶ್ಮೀರಿ ಚಿಲ್ಲಿ ಪೌಡರ್, ಧನಿಯಾ ಪೌಡರ್, ಒಣಶುಂಠಿಯನ್ನು ಹಾಕಿ ಹುರಿದು, ಇದಕ್ಕೆ ಟೊಮೆಟೋ ಪೇಸ್ಟ್, ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಹಾಕಿ, ೪ ವಿಷಲ್ ಕೂಗಿಸಿದರೆ ಮಟನ್ ರೋಗನ್ ಜೋಶ್ ಸವಿಯಲು ರೆಡಿ.