ಕೈಮಾ ಬಟಾಣಿ
ಬೇಕಾಗುವ ಸಾಮಗ್ರಿಗಳು :
*ಕೈಮಾ – ೧/೪ ಕೆ.ಜಿ
*ಅಚ್ಚಖಾರದ ಪುಡಿ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಹಸಿ ಬಟಾಣಿ – ೫೦ ಗ್ರಾಂ
*ಈರುಳ್ಳಿ – ೧
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಹಸಿರು ಮೆಣಸಿನಕಾಯಿ – ೫೦ ಗ್ರಾಂ
*ಟೊಮೆಟೋ – ೧
*ಗರಂ ಮಸಾಲ – ೧/೨ ಚಮಚ
*ಸಬ್ಬಸಿಗೆ ಸೊಪ್ಪು – ೩ ಚಮಚ
*ಮೆಂತ್ಯ ಸೊಪ್ಪು – ೩ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಅರಿಶಿಣ ಪುಡಿ – ೧/೨ ಚಮಚ
*ಉಪ್ಪು – ರುಚ್ಚಿಗೆ ತಕ್ಕಷ್ಟು
*ಎಣ್ಣೆ – ೫೦ ಗ್ರಾಂ
ಮಾಡುವ ವಿಧಾನ :
ಬೌಲಿಗೆ ಕೈಮಾ, ಅರಿಶಿಣ ಅಚ್ಚಖಾರದ ಪುಡಿ, ಧನಿಯಾ ಪುಡಿ, ಉಪ್ಪು , ಅಗತ್ಯಕ್ಕೆ ತಕಷ್ಟು ನೀರು, ಬಟಾಣಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಕುಕ್ಕರ್‌ಗೆ ಕಲಸಿಕೊಂಡ ಕೈಮಾವನ್ನು ಹಾಕಿ ೩ ವಿಷಲ್ ಕೂಗಿಸಿ. ಬಾಣಲಿಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಈರುಳ್ಳಿ ಹಾಕಿ ಕೆಂಪಾಗಿ ಹುರಿದು ಕೊಳ್ಳಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನ ಕಾಯಿ, ಟೊಮೆಟೊ ಹಾಕಿ ಹದವಾಗಿ ಬೇಯಿಸಿ. ನಂತರ ಸಬ್ಬಸಿಗೆ ಸೊಪ್ಪು, ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪನ್ನು ಹುರಿದು, ಉಪ್ಪು ಹಾಕಿ ಮಿಕ್ಸ್ ಮಾಡಿ. ಕುಕ್ಕರ್‌ನಲ್ಲಿ ಬೆಂದ ಕೈಮಾ ಹಾಕಿ ಸ್ವಲ್ಪ ಸಮಯ ಬೇಯಿಸಿ, ಗರಂ ಮಸಾಲೆ ಹಾಕಿ ತಿರುಗಿಸಿದರೆ ಕೈಮಾ ಬಟಾಣಿ ರೆಡಿ.