ಫಿಶ್ ಫ್ರೈ
ಬೇಕಾಗುವ ವಿಧಾನ
*ಮೀನು – ೧
*ಅಕ್ಕಿ ಹಿಟ್ಟು – ೧ ಚಮಚ
*ಕಾನ್ ಫ್ಲೋರ್ – ೧ ಚಮಚ
*ಕಸೂರಿ ಮೇಥಿ – ೧ ಚಮಚ
*ಗರಂ ಮಸಾಲ – ೧ ಚಮಚ
*ಅಚ್ಚಖಾರದ ಪುಡಿ – ೨ ಚಮಚ
*ಹುಣಸೇ ಹಣ್ಣಿನ ರಸ- ೨ ಚಮಚ
*ಉಪ್ಪು – ೧ ಚಮಚ
*ಎಣ್ಣೆ – ೧೫೦ ಮಿ.ಲೀ
ಮಾಡುವ ವಿಧಾನ :
ಬೌಲ್‌ನಲ್ಲಿ ಉಪ್ಪು, ಗರಂ ಮಸಾಲ, ಅಚ್ಚಖಾರದ ಪುಡಿ, ಅಕ್ಕಿ ಹಿಟ್ಟು, ಕಾರ್ನ್‌ಫ್ಲೋರ್, ಹುಣಸೇಹಣ್ಣಿನ ರಸ, ಕಸೂರಿ ಮೇಥಿ ಹಾಗೂ ಅಗತ್ಯವಿರುವಷ್ಟು ನೀರು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಮೀನು ಹಾಕಿ ೧೫ ನಿಮಿಷ ನೆನೆಯಲು ಬಿಡಿ. ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ, ಮಸಾಲೆಯಲ್ಲಿ ನೆನೆಸಿಟ್ಟ ಫಿಶ್‌ನ್ನು ಫ್ರೈ ಮಾಡಿದರೆ ರುಚಿಕರವಾದ ಫಿಶ್ ಫ್ರೈ ರೆಡಿ.