ಹರಿಯಾಲಿ ಫಿಶ್ ಫ್ರೈ
ಬೇಕಾಗುವ ಸಾಮಗ್ರಿಗಳು
ಮಾಡುವ ವಿಧಾನ:
ಹಸಿರು ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನ, ಕಡ್ಲೆಹಿಟ್ಟು, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ರುಬ್ಬಿಡಿ. ಬೌಲ್‌ನಲ್ಲಿ ಮೊಟ್ಟೆ, ಶುಂಠಿ ಬೆಳ್ಳುಳಿ ಪೇಸ್ಟ್, ಮೊಸರು, ಸ್ವಲ್ಪ ನೀರು ಹಾಕಿ ಕಲಸಿಕೊಳ್ಳಿ . ಇದರಲ್ಲಿ ಅಂಜಾಲ್ ಫಿಶ್‌ನ್ನು ನೆನೆಯಲು ಬಿಡಿ. ಮತ್ತೊಂದು ಬೌಲ್‌ನಲ್ಲಿ ಗರಂ ಮಸಾಲ, ಜೀರಿಗೆ ಪುಡಿ, ನಿಂಬೆರಸ, ರುಬ್ಬಿಕೊಂಡ ಮಸಾಲ ಹಾಕಿ ಮಿಕ್ಸ್ ಮಾಡಿ. ಇದನ್ನು ಮೀನಿನೊಂದಿಗೆ ೧೫ ನಿಮಿಷ ಮ್ಯಾರಿನೇಟ್ ಮಾಡಿ. ನಂತರ ತವಾಗೆ ಎಣ್ಣೆ ಹಾಕಿಸ್ವಲ್ಪ ಫ್ರೈ ಮಾಡಿ. ಮುಚ್ಚಳ ಮುಚ್ಚಿ ಅಗತ್ಯಕ್ಕೆ ತಕ್ಕಷ್ಟು ಬೇಯಿಸಿ ತೆಗೆದರೆ ಹರಿಯಾಲಿ ಫಿಶ್ ಫ್ರೈ ತಿನ್ನಲು ರೆಡಿ.