ಮಲಾಯಿ ಕಬಾಬ್
ಬೇಕಾಗುವ ಸಾಮಗ್ರಿಗಳು
ಮಾಡುವ ವಿಧಾನ :
ಬೌಲಿಗೆ ಚಿಕನ್, ನಿಂಬೆರಸ, ಶುಂಠಿ,ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕಾಳುಮೆಣಸಿನಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ೧೫ ನಿಮಿಷ ನೆನೆಯಲು ಬಿಡಿ. ಹಸಿರುಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ರುಬ್ಬಿಕೊಳ್ಳಿ. ಮತ್ತೊಂದು ಬೌಲಿಗೆ ಪಿಝಾ ಚೀಸ್, ಕಾರ್ನ್‌ಫ್ಲೋರ್, ಮೈದಾಹಿಟ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ನೆನೆಸಿಟ್ಟ ಚಿಕನ್, ರುಬ್ಬಿಕೊಂಡ ಹಸಿರು ಮೆಣಸಿನಕಾಯಿ ಮಿಶ್ರಣ, ಕಸೂರಿ ಮೇಥಿ ಹಾಕಿ ಚೆನ್ನಾಗಿ ಕಲಸಿ, ೨೦ ನಿಮಿಷ ಹಾಗೆಯೆ ಬಿಡಿ. ಆಮೇಲೆ ಸ್ಟಿಕ್‌ನಲ್ಲಿ ಚುಚ್ಚಿ, ತವಾ ಮೇಲೆ ಎಣ್ಣೆ ಹಾಕಿ ಶ್ಯಾಲೋ ಫ್ರೈ ಮಾಡಿದರೆ, ಮಲಾಯಿ ಕಬಾಬ್ ತಿನ್ನಲು ರೆಡಿ.