ಡಿಂಗ್ರಿ ಚಿಕನ್ ಕಬಾಬ್
ಬೇಕಾಗುವ ಸಾಮಗ್ರಿಗಳು
*ಚಿಕನ್ – ೧/೪ ಕೆ.ಜಿ
*ದಪ್ಪ ಮೆಣಸಿನ ಕಾಯಿ – ೧/೪ ಕೆ.ಜಿ
*ಬ್ಯಾಡಗಿ ಮೆಣಸಿನಕಾಯಿ – ೬
*ಮೈದಾ ಹಿಟ್ಟು – ೧ ಚಮಚ
*ಅಕ್ಕಿ ಹಿಟ್ಟು – ೧ ಚಮಚ
*ಕಾರ್ನ್ ಫ್ಲೋರ್ – ಒಂದೂವರೆ ಚಮಚ
*ಈರುಳ್ಳಿ – ೨
*ಹಸಿರು ಮೆಣಸಿನಕಾಯಿ – ೨
*ವಿನಿಗರ್ – ಒಂದೂವರೆ ಚಮಚ
*ಅರಿಶಿಣ – ೧/೪ ಚಮಚ
*ಕಾಳು ಮೆಣಸಿನ ಪುಡಿ – ೧ ಚಮಚ
*ಶುಂಠಿ – ೧/೨ ಚಮಚ
*ಬೆಳ್ಳುಳ್ಳಿ – ೧ ಚಮಚ
*ಮೊಟ್ಟೆ – ೧
*ಉಪ್ಪು – ೧ ಚಮಚ
ಮಾಡುವ ವಿಧಾನ :
ಒಣ ಮೆಣಸಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಬೌಲ್‌ಗೆ ಚಿಕನ್, ಉಪ್ಪು, ವಿನಿಗರ್, ಅರಿಶಿಣ, ಕಾಳು ಮೆಣಸಿನ ಪುಡಿ,ಶುಂಠಿ,ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ, ಹೆಚ್ಚಿಟ್ಟುಕೊಮಡ ಈರುಳ್ಳಿ, ರುಬ್ಬಿಕೊಂಡ ಒಣ ಮೆಣಸಿನಕಾಯಿ ಮತ್ತು ಮೊಟ್ಟೆಯನ್ನು ಹಾಕಿ. ನಂತರ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್‌ಫ್ಲೋರ್ ಹಾಕಿ ಎಲ್ಲವನ್ನೂ ಚೆನ್ನಾಗಿ ನೆನೆಸಿದ ಚಿಕನ್ ಹಾಕಿ ಫ್ರೈ ಮಾಡಿದರೆ ಡಿಂಗ್ರಿ ಚಿಕನ್ ಕಬಾಬ್ ಸವಿಯಲು ಸಿದ್ಧ.