ಚಿಕನ್ ಬಟರ್ ಪೆಪ್ಪರ್ ಡ್ರೈ
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ:
ತೊಳೆದು ಸ್ವಚ್ಛಗೊಳಿಸಿದ ಚಿಕನ್ ಪೀಸ್‌ಗಳನ್ನು ಬೌಲಿನಲ್ಲಿ ಹಾಲಿನ ಜೊತೆ ಹಾಕಿ ಕಲಸಿ. ೨೦ ನಿಮಿಷ ನೆನೆಯಲು ಬಿಡಿ. ಪ್ಯಾನಿಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿಯನ್ನು ಹಾಕಿ ಹುರಿದುಕೊಳ್ಳಿ. ಇದಕ್ಕೆ ಹಾಲಿನಲ್ಲಿ ನೆನೆಸಿದ ಚಿಕನ್ ಹಾಕಿ ಫ್ರೈ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮುಚ್ಚಳ ಮುಚ್ಚಿ ೫ ನಿಮಿಷ ಬೇಯಿಸಿ. ಕೊನೆಯಲ್ಲಿ ಬಿಳಿಕಾಳುಮೆಣಸಿನಪುಡಿ, ಬೆಣ್ಣೆ ಹಾಕಿ ಇನ್ನೂ ಸ್ವಲ್ಪ ಸಮಯ ಬೇಯಿಸಿದರೆ ರುಚಿಯಾದ ಚಿಕನ್ ಬಟರ್ ಪೆಪ್ಪರ್ ಡ್ರೈ ಸವಿಯಲು ಸಿದ್ಧ.