ಬ್ರೆಡ್ ಆಮ್ಲೇಟ್
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ:
ಒಂದು ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಎಣ್ಣೆಯನ್ನು ಹಾಕಿ ಸಣ್ಣಗೆ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಫ್ರೈ ಮಾಡಿಕೊಳ್ಳಿ. ಇದರೊಂದಿಗೆ ಟೊಮೊಟೊ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನಪುಡಿ, ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನಕಾಯಿಯ ಪೇಸ್ಟ್, ಗರಂ ಮಸಾಲ ಪೌಡರ್ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಪಾತ್ರೆಯನ್ನು ಕೆಳಗಿಳಿಸಿ ಅದಕ್ಕೆ ಮೊಟ್ಟೆಯನ್ನು ಒಡೆದು ಸಾಂಪ್ಲಾ ರೆಡಿ ಮಾಡಿಕೊಳ್ಳಿ. ಒಲೆಮೇಲೆ ಹೆಂಚನ್ನು ಸಣ್ಣ ಉರಿಯಲ್ಲಿಟ್ಟು ಬ್ರೆಡ್ ಪೀಸನ್ನು ಎರಡು ಕಡೆ ಬಾಡಿಸಿ, ಅದಕ್ಕೆ ಒಂದು ಸೌಟ್ ಸಾಂಪ್ಲಾವನ್ನು ಹಾಕಿ. ಕೊತ್ತಂಬರಿ ಸೊಪ್ಪನ್ನು ಉದುರಿಸಿ ಎಣ್ಣೆ ಹಾಕಿ, ಮತ್ತೆ ಬಾಡಿಸಿ. ಮತ್ತೊಂದು ಕಡೆ ಮಗುಚಿ ಹಾಕಿ ಚೆನ್ನಾಗಿ ಫ್ರೈ ಮಾಡಿದರೆ, ರುಚಿಕರ ಬ್ರೆಡ್ ಆಮ್ಲೇಟ್ ಸವಿಯಲು ರೆಡಿ.