ಮಟನ್ ಖಟ್ಟಾ ರೋಲ್
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ:
ಬೌಲ್‌ಗೆ ಗೋಧಿಹಿಟ್ಟು, ಮೈದಾಹಿಟ್ಟು, ಉಪ್ಪು, ಅಗತ್ಯವಿರುವಷ್ಟು ನೀರು ಹಾಕಿ, ಚಪಾತಿ ಹಿಟ್ಟಿನಂತೆ ಗಂಟಾಗದಂತೆ ಕಲಸಿಕೊಳ್ಳಿ. ಪ್ಯಾನ್‌ಗೆ ಎಣ್ಣೆಹಾಕಿ, ಕಾದಮೇಲೆ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ, ಶುಂಠಿ, ಹಸಿರು ಮೆಣಸಿನಕಾಯಿ, ಪುದೀನಾ, ಅಚ್ಚಖಾರದಪುಡಿ, ಗರಂ ಮಸಾಲ, ಕಾಳುಮೆಣಸಿನಪುಡಿ, ಅರಿಶಿನ, ಗೋಡಂಬಿ, ಚಿಲ್ಲಿ ಸಾಸ್ ಮತ್ತು ಮಟನ್ ಕೈಮಾವನ್ನು ಒಂದೊಂದಾಗಿ ಹಾಕುತ್ತಾ ಫ್ರೈ ಮಾಡಿಕೊಳ್ಳಿ. ಚೆನ್ನಾಗಿ ಕಲಸಿದ ನಂತರ ಈ ಮಿಶ್ರಣವನ್ನು ಬೌಲ್‌ಗೆ ಹಾಕಿಡಿ. ಕಲಸಿಟ್ಟುಕೊಂಡ ಹಿಟ್ಟನ್ನು ಉಂಡೆ ಮಾಡಿ ಚಪಾತಿಯಂತೆ ಲಟ್ಟಿಸಿ. ಬೌಲ್‌ನಲ್ಲಿರುವ ಮಿಶ್ರಣವನ್ನಿಟ್ಟು ರೋಲ್ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಈಗ ರುಚಿಯಾದ ಮಟನ್ ಖಟ್ಟಾ ರೋಲ್ ಸವಿಯಲು ರೆಡಿ.