ಹರಿಯಾಲಿ ಟಿಕ್ಕಾ
ಬೇಕಾಗುವ ಸಾಮಗ್ರಿಗಳು
*ಚಿಕನ್(ಬೋನ್ ಲೆಸ್) – ೧/೨ ಕೆ.ಜಿ
*ಪುದೀನ ಸೊಪ್ಪು –
*ಕೊತ್ತಂಬರಿ ಸೊಪ್ಪು –
*ಹಸಿರು ಮೆಣಸಿನಕಾಯಿ – ೫ ಚಮಚ
*ಮೊಸರು – ೪ ಚಮಚ
*ಗರಂ ಮಸಾಲ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಜೀರಿಗೆ ಪುಡಿ – ೧ ಚಮಚ
*ತಂದೂರಿ ಚಿಕನ್ ಮಸಾಲ – ೧ ಚಮಚ
*ನಿಂಬೆ ಹಣ್ಣು – ೧
*ಕಸೂರಿ ಮೇಥಿ- ೧ ಚಮಚ
*ಉಪ್ಪು -೧ ಚಮಚ
*ಎಣ್ಣೆ – ೨೦೦ ಗ್ರಾಂ
ಮಾಡುವ ವಿಧಾನ :
ಸಣ್ಣಗೆ ಹೆಚ್ಚಿದ ಪುದೀನಾ, ಕೊತ್ತಂಬರಿ ಸೊಪು, ಹಸಿರು ಮೆಣಸಿನಕಾಯಿಯ ಜೊತೆಗೆ ಸ್ವಲ್ಪ ಮೊಸರು ಸೇರಿಸಿ ರುಬ್ಬಿಕೊಳ್ಳಿ. ಒಂದು ಬೌಲಿಗೆ ಅರಿಶಿಣ, ಉಪ್ಪು, ಬೋನ್‌ಲೆಸ್ ಚಿಕನ್ ಹಾಕಿ, ೨೦ ನಿಮಿಷ ನೆನೆಸಿಡಿ. ಮೊಟ್ಟೆ, ಗರಂ ಮಸಾಲ, ಧನಿಯಾ ಪುಡಿ, ಜೀರಿಗೆ ಪುಡಿ, ನಿಂಬೆರಸ, ರುಬ್ಬಿಕೊಂಡ ಮಸಾಲ ಹಾಗೂ ತಂದೂರಿ ಚಿಕನ್ ಮಸಾಲ ಹಾಕಿ ಚೆನ್ನಾಗಿ ಬೆರೆಸಿ. ಬಾಣಲಿಗೆ ಎಣ್ಣೆ ಹಾಕಿ ಅದು ಕಾದ ನಂತರ ಇದಕ್ಕೆ ಮಿಶ್ರಣವನ್ನು ಹಾಕಿ, ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬೇಯಿಸಿ. ನಂತರ ಈ ಚಿಕನ್ ಅನ್ನು ಒಲೆಯ ಮೇಲೆ ಸುಟ್ಟರೆ ಹರಿಯಾಲಿ ಟಿಕ್ಕಾ ರೆಡಿ.