ಆಲೂ ಪೊಹಾ
ಬೇಕಾಗುವ ಪದಾರ್ಥಗಳು:
ಎಣ್ಣೆ – ೪ ಚಮಚ
ತುಪ್ಪ – ೨ ಚಮಚ
ಸೋಂಪು – ೧ ಚಮಚ
ಇಂಗು – ಚಿಟಿಕೆ
ಕರಿಬೇವು – ಸ್ವಲ್ಪ
ಈರುಳ್ಳಿ – ೨
ಹಸಿಮೆಣಸಿನಕಾಯಿ – ೬
ಆಲೂಗೆಡ್ಡೆ – ೨
ಅಚ್ಚಖಾರದಪುಡಿ – ೧ ಚಮಚ
ಸಕ್ಕರೆ – ೪ – ೬ ಚಮಚ
ಅರಿಶಿನ – ಅರ್ಧ ಚಮಚ
ದಪ್ಪಅವಲಕ್ಕಿ – ೧ ಪಾವು
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆಹೋಳು – ೩
ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
ಸೇವ್ – ರುಚಿಗೆ ತಕ್ಕಷ್ಟು
ವಿಧಾನ: ಹುಳಿ ಮತ್ತು ಸಿಹಿ ಮುಂದಿರುತ್ತದೆ. ಎಣ್ಣೆ ಮತ್ತು ತುಪ್ಪಕ್ಕೆ ಸೋಂಪು, ಇಂಗು, ಕರಿಬೇವು ಹಾಕಿ ಬಾಡಿಸಿ, ಹೆಚ್ಚಿದ ಈರುಳ್ಳಿ, ಸೀಳಿದ ಹಸಿಮೆಣಸಿನಕಾಯಿ ಮತ್ತು ಸಿಪ್ಪೆ ತೆಗೆದು, ಚಿಕ್ಕದಾಗಿ ಮತ್ತು ಚೌಕಾಕಾರಕ್ಕೆ ಹೆಚ್ಚಿದ ಆಲೂಗೆಡ್ಡೆ ಹಾಕಿ, ಕೆಂಪಗೆ ಬಾಡಿಸಿ, ಬೇಯಿಸಿ, ಅಚ್ಚಖಾರದಪುಡಿ, ಸಕ್ಕರೆ, ಅರಿಶಿನ, ನೀರಿನಲ್ಲಿ ನೆನೆಸಿದ ದಪ್ಪಅವಲಕ್ಕಿ, ಉಪ್ಪು, ನಿಂಬೆರಸ ಹಾಕಿ ಬಾಡಿಸಿ, ಮೇಲೆ ಕೊತ್ತಂಬರಿಸೊಪ್ಪು ಮತ್ತು ಸೇವ್ ಪುರಿ ಉದುರಿಸಬೇಕು. ಬಿಸಿನೀರಿಗೆ ಅವಲಕ್ಕಿ ಹಾಕಿದರೆ ಬೇಗ ನೆನೆಯುತ್ತದೆ.