ಬೆಂಗಳೂರು: ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಪುರಸಭಾ ಸದಸ್ಯನನ್ನ (Congress Municipal Councilor) ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆನೇಕಲ್ (Anekal) ಪಟ್ಟಣದ ಬಹದ್ದೂರ್‌ಪುರದ ಬಳಿ ನಡೆದಿದೆ.ಕಾಂಗ್ರೆಸ್‌ ಪಕ್ಷದ (Congress Party) ಪುರಸಭಾ ಸದಸ್ಯ ರವಿ ಕೊಲೆಯಾದ ವ್ಯಕ್ತಿ. ಹೊಂಚು ಹಾಕಿ ಹಂತಕರು ಕೊಲೆ ಮಾಡಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ಹಂತಕರು ಎಸ್ಕೇಪ್‌ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಸರ್ ನರಕ ಅನುಭವಿಸ್ತಿದ್ದಾರೆ: ಜೈಲಿನಲ್ಲಿದ್ಧ ಖೈದಿ ಸಿದ್ಧಾರೂಢಏನಿದು ಭೀಕರ ಕೃತ್ಯ?
ಕಳೆದ 15 ದಿನಗಳಿಂದಲೂ ಯುವಕರ ಗ್ಯಾಂಗ್‌ವೊಂದು ಲಾಂಗ್‌ ಹಿಡಿದು ಓಡಾಡುತ್ತಿತ್ತು. ಈ ಬಗ್ಗೆ ʻಪಬ್ಲಿಕ್‌ ಟಿವಿʼ ವರದಿ ಮಾಡಿ ಎಚ್ಚರಿಸಿತ್ತು. ಇದೀಗ ಲಾಂಗ್‌ ಹಿಡಿದು ಓಡಾಡುತ್ತಿದ್ದ ಅದೇ ಯುವಕರ ಗ್ಯಾಂಗ್‌ನಿಂದ ಬಹದ್ದೂರ್‌ಪುರದ ಬಳಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಿದ್ದಾರೆ.ಸದ್ಯ ಹಳೇ ವೈಷಮ್ಯಕ್ಕೆ ಹಂತಕರು ಸಿಕ್ಕ ಸಿಕ್ಕ ಕಡೆಗಳಲ್ಲಿ ಮಚ್ಚು ಬೀಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅರಣ್ಯ ಇಲಾಖೆ ಭರದ ಸಿದ್ಧತೆ – 18 ಆನೆಗಳು ಗುರುತುSign in to your account
Username or Email Address


Password

 Remember Me


