ಬೆಂಗಳೂರು: ವಿಧಾನ ಪರಿಷತ್‌ (Vidhan Parishad) ಸದಸ್ಯ ಸೂರಜ್‌ ರೇವಣ್ಣಗೆ (Suraj Revanna) ಎರಡೂ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದೆ.ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾತ್ರ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ. ಜೂನ್‌ 23 ರಂದು ಸೂರಜ್‌ ರೇವಣ್ಣ ಅವರನ್ನು ಬಂಧಿಸಲಾಗಿತ್ತು.ಹೊಳೆ ನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 377 ಅಡಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಸೂರಜ್‌ ರೇವಣ್ಣ ಅವರನ್ನು ಜೂನ್‌ 23 ರಂದು ಸಿಐಡಿ ಅರೆಸ್ಟ್‌ ಮಾಡಿತ್ತು.ಮೊದಲ ಪ್ರಕರಣದ ಹೊತ್ತಲ್ಲೇ ಸೂರಜ್ ರೇವಣ್ಣ ಕಾರ್ ಚಾಲಕ ಎರಡನೇ ದೂರು ದಾಖಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಬಂಧನ ಆಗಿರಲಿಲ್ಲ. ಹಾಗಾಗಿ, ಜನಪ್ರತಿನಿಧಿಗಳ ಕೋರ್ಟ್ 2 ಪ್ರಕರಣಗಳಲ್ಲಿ  ಷರತ್ತು ಬದ್ಧ ಜಾಮೀನು ನೀಡಿದೆ. ಮಂಗಳವಾರ ಷರತ್ತು ಪೂರೈಕೆ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಸೂರಜ್ ಬಿಡುಗಡೆಯಾಗಲಿದ್ದಾರೆ.Sign in to your account
Username or Email Address


Password

 Remember Me


