ಬೆಂಗಳೂರು: ಕರ್ನಾಟಕದ (Karnataka) ಐಟಿ ಉದ್ಯೋಗಿಗಳಿಗೆ (IT Employees) ಬಿಗ್ ಶಾಕಿಂಗ್ ನ್ಯೂಸ್ ಕಾದಿದೆ. ಇನ್ಮುಂದೆ 9 ಗಂಟೆಯಲ್ಲ. ಸರ್ಕಾರ ತಿದ್ದುಪಡಿ ಮಾಡಿ ಕಾಯ್ದೆ ಜಾರಿಗೆ ಬಂದರೆ 14 ಗಂಟೆ ಕೆಲಸ ಮಾಡಬೇಕಾಗಬಹುದು.ಕರ್ನಾಟಕ ಶಾಪ್ಸ್ ಕಮರ್ಷಿಯಲ್ ಎಸ್ಟಾಬ್ಲಿಶ್ಮೆಂಟ್ 2024 ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೆ ತರಲು ಸರ್ಕಾರದ ಮೇಲೆ ಕಂಪನಿಗಳು ಒತ್ತಡ ಹೇರುತ್ತಿವೆ. ಕಾರ್ಮಿಕ ಇಲಾಖೆಯೂ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದ್ದು, ಐಟಿ ಕಾರ್ಮಿಕರ ಅಸೋಸಿಯೇಷನ್ ಜೊತೆ ಸಭೆ ನಡೆಸಿದೆ. ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿಈ ಪ್ರಸ್ತಾವನೆಗೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. 14 ಗಂಟೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಜೊತೆಗೆ ಅದೇ ಸಂಬಳಕ್ಕೆ ಹೆಚ್ಚು ಸಮಯ ದುಡಿಯಬೇಕು ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.ಬುಧವಾರ ಐಟಿ ಉದ್ಯೋಗಿಗಳ ಸಭೆ ಕರೆದಿದ್ದು, ಕಾಯ್ದೆ ಜಾರಿಯಾದರೆ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಲು ಮುಂದಾಗಿದೆ.ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಪ್ರತಿಕ್ರಿಯಿಸಿ, ಯಾವುದೋ ಇಂಡಸ್ಟ್ರಿ ಕಡೆಯಿಂದ ಬೇಡಿಕೆ ಬಂದಿದೆ. ಈ ವಿಚಾರಕ್ಕೆ ಪರ-ವಿರೋಧ ಚರ್ಚೆ ಇದ್ದು,ಅಂತಿಮ ತೀರ್ಮಾನ ಮಾಡಬೇಕಿದೆ ಎಂದಿದ್ದಾರೆ.Sign in to your account
Username or Email Address


Password

 Remember Me


