– ಕುಡಿಯಲು ನೀರಿಲ್ಲ, ವಿದ್ಯುತ್ ಪೂರೈಕೆ ಸರಿಯಾಗಿಲ್ಲ ಎಂದು ಸಂತ್ರಸ್ತರ ಅಳಲು
– ಜನರು ಕೂಗಾಡುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತ ಸಚಿವರುಕೊಡಗು: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವ ಬೋಸರಾಜು (N.S.Boseraju) ಅವರನ್ನು ಸಂತ್ರಸ್ತ ಜನರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಸೋಮವಾರಪೇಟೆ ತಾಲ್ಲೂಕಿನ ಜಂಬೂರಿಗೆ ಸಚಿವ ಬೋಸರಾಜು ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ ಭೇಟಿ ನೀಡಿದ್ದರು. ಮಳೆಯಿಂದ ಹಾನಿಗೊಳಗಾಗಿರುವ ಸ್ಥಳಗಳಿಗೆ ತೆರಳಿ ವೀಕ್ಷಣೆ ಮಾಡಿದರು. ಇದನ್ನೂ ಓದಿ: ರಾಜಕೀಯ ದ್ವೇಷಕ್ಕಾಗಿ ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು: ಬಸವರಾಜ ಬೊಮ್ಮಾಯಿ2018 ರಲ್ಲಿ ಮಹಾ ಮಳೆಯಿಂದ ಆಸ್ತಿಪಾಸ್ತಿ, ಮನೆಗಳನ್ನು ಕಳೆದುಕೊಂಡ ನಮಗೆ ಸರ್ಕಾರ ಮನೆ ನೀಡಿದೆ. ಅದರೆ ಯಾವುದೇ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕೊಡದೇ ಏಕಾಏಕಿ ಮನೆಗಳಿಗೆ ಕಳಿಸಿದೆ. ಇವತ್ತು ಇಲ್ಲಿಗೆ ಬಂದು ನೆಮ್ಮದಿಯನ್ನು ಕಳೆದುಕೊಂಡಿದ್ದೀವಿ. ಹಲವಾರು ಬಾರಿ ಶಾಸಕರು, ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೊಡಗು ಉಸ್ತುವಾರಿ ಸಚಿವ ಬೋಸರಾಜು ಸಂತ್ರಸ್ತರು ತರಟೆಗೆ ತೆಗೆದುಕೊಂಡರು.ಕುಡಿಯುವ ನೀರಿಲ್ಲ. ಯುಜಿಡಿ ಬ್ಲಾಕ್ ಆಗಿ ತಿಂಗಳುಗಳಾಗಿವೆ. ವಿದ್ಯುತ್ ಸರಿಯಾಗಿ ಪೂರೈಕೆ ಇಲ್ಲ. ಚರಂಡಿ ವ್ಯವಸ್ಥೆಗಳಿಲ್ಲ. ಎಂಎಲ್‌ಎ, ಜಿಲ್ಲಾಧಿಕಾರಿ ಯಾರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆ ಯಾರು ಬಗೆಹರಿಸುತ್ತಿಲ್ಲವೆಂದು ಸಚಿವರ ಮುಂದೆ ನೂರಾರು ಜನರು ಆಕ್ರೋಶ ಹೋರಹಾಕಿದರು. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಂಟಿ, ದ್ವೇಷದಿಂದ ಬಿಜೆಪಿ ವಿರುದ್ಧ ಹಗರಣ ಆರೋಪ: ಕಾರಜೋಳ ಕಿಡಿಜನರು ಸಮಸ್ಯೆ ಹೇಳುವಾಗಲೇ, ನಿಮ್ಮ ಸಮಸ್ಯೆ ಬಗ್ಗೆ ಹರಿಸುತ್ತೇವೆ ಎಂದು ಹೇಳಿದ ಬೋಸರಾಜು ಜನರು ಕೂಗಾಡುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತರು. ಐಗೂರಿಗೆ ಹೋಗಬೇಕೆಂದು ಕಾರು ಹತ್ತಿ ಹೊರಟರು. ಇದರಿಂದಾಗಿ ಜನರು ಇನ್ನಷ್ಟು ಆಕ್ರೋಶ ಹೊರಹಾಕಿದರು.Sign in to your account
Username or Email Address


Password

 Remember Me


