ಬಳ್ಳಾರಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಒಂಟಿಯಾಗಿದ್ದಾರೆ. ಸಿಎಂ ಪತ್ರಿಕಾಗೋಷ್ಠಿ ಮಾಡಿದಾಗ ಅವರ ಪಕ್ಕದಲ್ಲಿ ಕೂರಲು ಅವರ ಪಕ್ಷದ ನಾಯಕರು, ಮಂತ್ರಿಗಳು ಹಿಂಜರಿಯುತ್ತಿದ್ದಾರೆ. ಅಷ್ಟೇ ಅಲ್ಲಾ ವಿಧಾನಸಭೆಯಲ್ಲೂ ಕೂಡ ಸಿದ್ದರಾಮಯ್ಯನವರು ಒಂಟಿಯಾಗಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ (Govinda Karajola) ಹೇಳಿದ್ದಾರೆ.ಬಳ್ಳಾರಿಯ (Ballari) ಸಂಡೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಏನಾದರು ಮಾತನಾಡಿದರೆ ಅದನ್ನು ಬೆಂಬಲಿಸಲು ಯಾವ ಶಾಸಕರು, ಸಚಿವರು ಎದ್ದು ನಿಲ್ಲುತ್ತಿಲ್ಲ. ಸಿದ್ದರಾಮಯ್ಯ ಈ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಎಂದು ಭಯದಿಂದ ಎಲ್ಲರೂ ಅವರನ್ನು ಬಿಟ್ಟು ದೂರ ಸರಿಯುತ್ತಿದ್ದಾರೆ. ಬಿಜೆಪಿ (BJP) ಕಾಲದ 21 ಹಗರಣಗಳನ್ನು ತನಿಖೆ ಮಾಡುತ್ತಾರಂತೆ. ನೀವು ಒಂದು ವರ್ಷ ಮೂರು ತಿಂಗಳು ಕಡುಬು ತಿನ್ನುತ್ತಿದ್ರಾ? ಇಷ್ಟು ದಿನ ಯಾಕೆ ಬಾಯಿ ಮುಚ್ಚಿಕೊಂಡಿದ್ರಿ? ದ್ವೇಷ ಮನೋಭಾವನೆಯಿಂದ ಸುಳ್ಳು ಆರೋಪ ಮಾಡೋದು ಸರಿಯಲ್ಲ ಎಂದರು. ಇದನ್ನೂ ಓದಿ: ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲುವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Valmiki Development Corporation Scam) ಸಿಲುಕಿದ್ದರಿಂದ ಸಿಎಂ ಸಿದ್ದರಾಮಯ್ಯ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳು ಹಗರಣ ಮಾಡಿದ್ದಾರೆ ಎನ್ನುತ್ತೀರಿ, ನೀವು ಅಸಹಾಯಕರಾ? ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅವರ ವ್ಯಕ್ತಿತ್ವಕ್ಕೆ ಮೆರುಗು ಬರುತ್ತದೆ. ದೇಶಕ್ಕೆ ಬಂದು 75 ವರ್ಷ ಆಗಿದೆ. 60 ವರ್ಷ ಅನೇಕ ಇಡಿ, ಐಟಿ ದಾಳಿ ಆಗಿದೆ. ಹಾಗಾದರೆ ಅವನ್ನೆಲ್ಲಾ ನೀವೆ ಮಾಡಿಸಿದ್ದು ಎಂದು ಹೇಳಿದ್ದೇವಾ? ಕಾಂಗ್ರೆಸ್‌ನವರ (Congress) ಆರೋಪವನ್ನು ಜನ ನಂಬಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಭರ್ತಿಗೆ ಕೇವಲ 2 ಅಡಿಯಷ್ಟೇ ಬಾಕಿ


 Advertisement 







 Advertisement 




Sign in to your account
Username or Email Address


Password

 Remember Me


