ಬೆಂಗಳೂರು: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ 12 ಮಂದಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬೆಂಗಳೂರು (Bengaluru) ಸೇರಿ ರಾಜ್ಯದ 56 ಕಡೆ ನೂರಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ (Lokayukta Raid) ಅಪಾರ ಪ್ರಮಾಣ ನಗ-ನಗದು-ಆಸ್ತಿ ಪತ್ರಗಳನ್ನು ಪತ್ತೆ ಹಚ್ಚಿದೆ.ಕಾನೂನು ಮಾಪನ ಇಲಾಖೆಯ ಉಪ ನಿಯಂತ್ರಕ ಅಥರ್ ಅಲಿಗೆ ಸೇರಿದ ಬೆಂಗಳೂರಿನ ಮನೆ ಮೇಲೆ ಅಧಿಕಾರಿಗಳು ರೇಡ್ ಮಾಡಿದರು. ದಾಳಿ ವಿಚಾರ ಗೊತ್ತಾಗುತ್ತಲೇ ಅಥರ್ ಅಲಿ ಪುತ್ರಿ ಪಕ್ಕದ ಮನೆಗೆ ಕಿಟಕಿ ಮೂಲಕ ಚಿನ್ನದ ಬ್ಯಾಗ್ ಎಸೆದಿದ್ದರು. ಆದ್ರೆ, ನೆರೆಮನೆಯವರು ಲೋಕಾಯುಕ್ತ ಅಧಿಕಾರಿಗಳಿಗೆ ಚಿನ್ನದ ಬ್ಯಾಂಗ್ ನೀಡಿದ್ದು, ಇದರಲ್ಲಿ 2 ಕೆಜಿಗೂ ಹೆಚ್ಚು ಚಿನ್ನ, 2 ಕೆಜಿ ಬೆಳ್ಳಿ, ಡೈಮಂಡ್ ನೆಕ್ಲೇಸ್, ದುಬಾರಿ ವಾಚ್‌ಗಳೂ ಕೂಡ ಸಿಕ್ಕಿವೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಆರಂಭ – ಸಂಸದ ಬ್ರಿಜೇಶ್‌ ಚೌಟ ಮನವಿಗೆ ತಕ್ಷಣವೇ ಸ್ಪಂದಿಸಿದ ರೈಲ್ವೆ ಇಲಾಖೆಇನ್ನು, ಮನೆಯಲ್ಲಿ 25 ಲಕ್ಷ ರೂ. ನಗದು ಕೂಡ ಸಿಕ್ಕಿದೆ. ಶಿವಮೊಗ್ಗದಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್, ಚಿಕ್ಕಬಳ್ಳಾಪುರದಲ್ಲಿ ಹಿರಿಯ ಪಶು ವೈದ್ಯಾಧಿಕಾರಿ ಆರ್ ಸಿದ್ದಪ್ಪ, ಯಾದಗಿರಿಯ ಯೋಜನಾಧಿಕಾರಿ ಬಲವಂತ ರಾಠೋಡ್, ಮೈಸೂರಲ್ಲಿ ಲೇಬರ್ ಇನ್ಸ್‌ಪೆಕ್ಟರ್‌ ಚೇತನ್, ಕೆಐಎಡಿಬಿ ಅಪರ ನಿರ್ದೇಶಕ ಮುದ್ದುಕುಮಾರ್ ಅವರ ತುಮಕೂರು ಮನೆ ಸೇರಿದಂತೆ ಹಲವೆಡೆ ದಾಳಿ ನಡೆಸಿ, ಅಪಾರ ಪ್ರಮಾಣದ ಸಂಪತ್ತನ್ನು ಹೆಕ್ಕಿ ತೆಗೆದಿದೆ. ಇದನ್ನೂ ಓದಿ: ಡೆಂಗ್ಯೂ ಜ್ವರದಿಂದ MBBS ವಿದ್ಯಾರ್ಥಿ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!ಮುದ್ದುಕುಮಾರ್ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ:
ತುಮಕೂರಿನ ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕರಾದ ಮುದ್ದುಕುಮಾರ್, ಮನೆಯಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಮುದ್ದುಕುಮಾರ್ ಕಚೇರಿಯಲ್ಲಿ ಮಹಿಳಾ ಅಧಿಕಾರಿ ಹೆಸರಲ್ಲಿ ಬೇನಾಮಿ ಇಂಡಸ್ಟ್ರಿಯಲ್‌ ಶೆಡ್‌ನ ಕ್ರಯಪತ್ರ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿದೆ. ಅವರ ಮನೆಯಲ್ಲಿ ದುಬಾರಿ ಬೆಲೆಯ ಹ್ಯೂಬ್ಲೋಟ್ ವಾಚ್ ಪತ್ತೆಯಾಗಿದೆ. ಅಲ್ಲದೇ 1.6 ಕೋಟಿ ರೂ. ಮೌಲ್ಯದ ಮೂರು ಮನೆ (ಸರ್ಕಾರಿ ಮೌಲ್ಯ) ಮನೆಗಳನ್ನು ಹೊಂದಿದ್ದಾರೆ. ಈ ಪೈಕಿ ನಾಗರಬಾವಿಯಲ್ಲಿ ಎರಡು ಮನೆ, ತುಮಕೂರರಲ್ಲಿ ಒಂದು ಮನೆ ಹೊಂದಿರುವ ದಾಖಲೆಗಳು ಲಭ್ಯವಾಗಿದೆ. ಇದನ್ನೂ ಓದಿ: ವಾಲ್ಮೀಕಿ ಹಗರಣ; ಎಸ್‌ಐಟಿ ಮುಟ್ಟುಗೋಲು ಹಾಕಿಕೊಂಡ ಹಣದ ವಿವರ ನೀಡಿದ ಸಿಎಂಅಲ್ಲದೇ 17 ಲಕ್ಷ ರೂ. ಮೌಲ್ಯದ 6.5 ಎಕರೆ ಕೃಷಿ ಜಮೀನು, 70 ಲಕ್ಷ ರೂಪಾಯಿ ಮೌಲ್ಯದ ಫಾರ್ಮ್ ಹೌಸ್, ಮನೆಯಲ್ಲಿ 1.13 ಲಕ್ಷ ರೂ. ನಗದು, 87 ಲಕ್ಷ ಮೌಲ್ಯದ 1.2 ಕೆಜಿ ಚಿನ್ನಾಭರಣ, 1.8 ಲಕ್ಷ ರೂ. ಮೌಲ್ಯದ 2 ಕೆಜಿ ಬೆಳ್ಳಿ, 35 ಲಕ್ಷ ರೂ. ಮೌಲ್ಯದ ವಾಹನಗಳು, ತುಮಕೂರು ಕೈಗಾರಿಕ ಪ್ರದೇಶದಲ್ಲಿ 3 ಕೋಟಿ ಬೆಲೆಬಾಳುವ ಎರಡು ಇಂಡಸ್ಟ್ರಿಯಲ್‌ ಶೆಡ್, ಸಹಕಾರ ಬ್ಯಾಂಕ್‌ನಲ್ಲಿ 55 ಲಕ್ಷ ರೂ. ಠೇವಣಿ, ಎಸ್‌ಬಿಐ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ., 1 ಲಕ್ಷ ರೂ. ಮೌಲ್ಯದ ಪಿಸ್ತೂಲ್ ಮತ್ತು ಏರ್ ಗನ್ ಪತ್ತೆಯಾಗಿದೆ. ಮುದ್ದುಕುಮಾರ್ ಮನೆಯಲ್ಲಿ ಪತ್ತೆಯಾದ ಆಸ್ತಿ ಕಂಡು ಅಧಿಕಾರಿಗಳೇ ಸುಸ್ತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.Sign in to your account
Username or Email Address


Password

 Remember Me


