ಬೆಂಗಳೂರು: ಹಿರಿಯ ನಾಗರಿಕರ (Senior Citizens) ಸಾಧನೆಗಳು ಯುವಜನರಿಗೆ ಸ್ಪೂರ್ತಿ. ಹಿರಿಯರ ಬದುಕು ಕೇವಲ ಆದರ್ಶವಾಗಿಸದೇ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವಹಿರಿಯ ನಾಗರೀಕರ ದಿನಾಚರಣೆ 2024 ಅನ್ನು ಉದ್ಘಾಟಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು, ಘನತೆಯ ಬಾಳಿನೊಂದಿಗೆ ವಯೋಪಕ್ವತೆ, ವಿಶ್ವದಾದ್ಯಂತ ಹಿರಿಯ ಜೀವಿಗಳಿಗೆ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸುವುದರ ಮಹತ್ವ ಎಂಬ ವಿಶ್ವಸಂಸ್ಥೆಯ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ಸಿಎಂ ಪತ್ನಿ ಪತ್ರದ ಬೆನ್ನಲ್ಲೇ 14 ಸೈಟ್‌ಗಳ ಸೇಲ್ ಡೀಡ್ ರದ್ದು; ಅಧಿಕಾರಿಗಳಿಂದ ಭೂಮಿ ಪರಿಶೀಲನೆಹಿರಿಯನ್ನು ಗೌರವದಿಂದ ಕಾಣಬೇಕು. ಅವರ ಅನುಭವಗಳನ್ನು ಗೌರವಿಸಿ ಪಾಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹಿರಿಯರ ಕೊಡುಗೆಗಳು ಹಾಗೂ ಅವರ ಮಾರ್ಗದರ್ಶನದಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು. ಬಾಲ್ಯ, ಯೌವ್ವನ, ವೃದ್ಧಾಪ್ಯ, ಮಾನವನ ಜೀವನದ ಸಹಜ ಘಟ್ಟಗಳು. ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿ ನೀಡಲೆಂಬ ಸದುದ್ದೇಶದಿಂದ ಹಿರಿಯ ನಾಗರಿಕನ್ನು ಗೌರವಿಸಿ ಸನ್ಮಾನಿಸಲಾಗುತ್ತದೆ. ನಮ್ಮ ಆತ್ಮಸಾಕ್ಷಿಯೇ ನ್ಯಾಯಾಲಯವಿದ್ದಂತೆ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದರು. ಸಮಾಜದಲ್ಲಿ ಇಂದು ಮೌಢ್ಯಗಳು, ಕಂದಾಚಾರಗಳಿವೆ. ಇವುಗಳಿಗೆ ಜೋತುಬೀಳದೇ ವೈಚಾರಿಕತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ರಾಷ್ಟçಕವಿ ಕುವೆಂಪುರವರು ತಿಳಿಸಿದಂತೆ ಮಾನವ, ಅಲ್ಪಮಾನವನಾಗದೇ, ವಿಶ್ವಮಾನವನಾಗಲು ಪ್ರಯತ್ನಿಸಬೇಕು. ಇದಕ್ಕಾಗಿ ಹಿರಿಯರ ಅನುಭವಗಳು ನಮಗೆ ದಾರಿದೀಪವಾಗಿದೆ ಎಂದು ನುಡಿದರು. ಇದನ್ನೂ ಓದಿ: ಹಿರಿಯ ನಾಗರಿಕರ ಮಾಸಾಶನ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ- ಲಕ್ಷ್ಮಿ ಹೆಬ್ಬಾಳ್ಕರ್2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಸುಮಾರು 57.91 ಲಕ್ಷದಷ್ಟು ಹಿರಿಯ ನಾಗರಿಕರಿದ್ದಾರೆ. ಇತ್ತೀಚಿನ ದಿನಮಾನದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ, ಮಕ್ಕಳು ವಿದೇಶದಲ್ಲಿ ನೆಲೆಸಿ, ತಂದೆ-ತಾಯಿಯನ್ನು ಪೋಷಿಸಲು ಸಾಧ್ಯವಾಗದೇ ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ. ಸುಮಾರು 50 ಲಕ್ಷ ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಈ ಮಾಸಾಶನದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಅಕ್ಟೋಬರ್ 3ಕ್ಕೆ PSI ಪರೀಕ್ಷೆ; ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ, ENT ವೈದ್ಯರ ನಿಯೋಜನೆ: – ಕೆಇಎಹಿರಿಯ ನಾಗರಿಕರ ನೆಮ್ಮದಿಗೆ ಹಾಗೂ ಆರೋಗ್ಯವನ್ನು ಖಾತ್ರಿಪಡಿಸುವುದು ಸರ್ಕಾರದ ಕರ್ತವ್ಯ. ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಸಮಸಮಾಜ ನಿರ್ಮಿಸುವ ನಮ್ಮ ಗುರಿಯನ್ನು ಈಡೇರಿಸಲು ಆರ್ಥಿಕವಾಗಿ, ಸಾಮಾಜಿಕವಾಗಿ ಆಶಕ್ತರಾಗಿರುವ ಜನರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಿರಿಯ ನಾಗರಿಕರು, ವಿಕಲಚೇತನರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಪ್ರಶಸ್ತಿ ಪುರಸ್ಕೃತರ ಸಾಧನೆಗಳು ಯುವಜನರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು. ಇದನ್ನೂ ಓದಿ: ನಸ್ರಲ್ಲಾ ಹತ್ಯೆ ಬಳಿಕ ಹಿಜ್ಬುಲ್ಲಾ ಪ್ರತೀಕಾರದ ದಾಳಿ – ಮೊಸಾದ್‌ ಹೆಡ್‌ಕ್ವಾರ್ಟಸ್‌ ಮೇಲೆ ಅಟ್ಯಾಕ್‌






 Advertisement 




Sign in to your account
Username or Email Address


Password

 Remember Me


