ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಇದೇ ತಿಂಗಳ ಜುಲೈ 1 ರಿಂದ ನೈಸ್ ರಸ್ತೆ ಟೋಲ್ (Nice Road Toll) ದರ ಹೆಚ್ಚಿಸಿರುವ ಬೆನ್ನಲ್ಲೇ, ಬಿಎಂಟಿಸಿ ಪ್ರಯಾಣಿಕರಿಗೆ ಟಿಕೆಟ್ ದರ  ಏರಿಕೆಯ ಬಿಸಿ ತಟ್ಟಿದೆ.ನೈಸ್ ರೋಡ್ ಟೋಲ್‌ನಲ್ಲಿ ಸಂಚರಿಸುವ ಬಿಎಂಟಿಸಿ ಬಸ್ ಟಿಕೆಟ್ ದರ (BMTC Ticket Price) ಏರಿಸಲಾಗತ್ತಿದೆ. ಮಾದಾವರ ಟು ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಬಿಎಂಟಿಸಿ ಬಸ್ ದರ ಹೆಚ್ಚಳವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ʻಪಬ್ಲಿಕ್ ಟಿವಿʼಗೆ ತಿಳಿಸಿದ್ದಾರೆ. ಇದನ್ನೂ ಓದಿ: ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಬ್ಯಾಡ್‌ ನ್ಯೂಸ್- ಡಿಸೆಂಬರ್‌ನಲ್ಲೂ ‘ಪುಷ್ಪ 2’ ರಿಲೀಸ್ ಆಗೋದು ಡೌಟ್ಪ್ರತಿದಿನ ಮಾದಾವರದಿಂದ ಎಲೆಕ್ಟ್ರಾನಿಕ್‌ ಸಿಟಿಗೆ 21 ಬಿಎಂಟಿಸಿ ಬಸ್‌ಗಳನ್ನು 170 ಟ್ರಿಪ್‌ಗಳಲ್ಲಿ ಓಡಿಸಲಾಗುತ್ತಿದೆ. ಪ್ರಸ್ತುತ ಟಿಕೆಟ್ ದರ 60 ರೂಪಾಯಿ ಇದೆ. ಇದರಲ್ಲಿ ಟೋಲ್ ದರ 25 ರೂ. ಸಹ ಸೇರಿದೆ. ಈ ಟೋಲ್ ದರ ಏರಿಕೆಯಿಂದ 5 ರೂ. ಹೆಚ್ಚಳವಾಗೋ ಸಾಧ್ಯತೆಯಿದ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್ಬಿಎಂಟಿಸಿ ಬಸ್‌ ನೈಸ್ ರಸ್ತೆಯಲ್ಲಿ ಸಂಚರಿಸಲು ಒಂದು ಟ್ರಿಪ್‌ಗೆ 675 ರೂ. ಟೋಲ್ ನೀಡಬೇಕಿತ್ತು. ಜುಲೈ 1ರಿಂದ ಟೋಲ್‌ ದರ ಹೆಚ್ಚಾಗಿರುವುದರಿಂದ ಒಂದು ಬಸ್ ಟ್ರೀಪ್‌ಗೆ 785 ರೂ. ಟೋಲ್ ನೀಡಲಾಗುತ್ತಿದೆ. ಅಂದರೆ ಪ್ರತೀ ಟ್ರೀಪ್‌ಗೆ 110 ರೂ. ಹೆಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಧನುಷ್ ನಟನೆಯ ‘ರಾಯನ್’ ಚಿತ್ರದ ಟ್ರೈಲರ್ ರಿಲೀಸ್- ರಕ್ತಸಿಕ್ತವಾಗಿ ಕಾಣಿಸಿಕೊಂಡ ನಟನಾವು ಬಸ್ ದರ ಏರಿಕೆ ಮಾಡಿಲ್ಲ. ಆದ್ರೆ ಟೋಲ್‌ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ನೈಸ್ ರೋಡ್ ಟೋಲ್ ನಲ್ಲಿ ಸಂಚರಿಸೋ ಬಸ್ ದರ ಏರಿಕೆ ಆಗಿದೆ. ಎಲ್ಲಿ ಟೋಲ್‌ ಸಿಗುತ್ತೋ ಅಲ್ಲಿ ಬಸ್‌ ಸೀಟುಗಳನ್ನು ಡಿವೈಡ್ ಮಾಡತ್ತೇವೆ. ಟೋಲ್ ರೇಟ್ ಎಷ್ಟು ಜಾಸ್ತಿ ಮಾಡಿರುವ ಕಾರಣ ಅಷ್ಟು ದರವನ್ನ ಗ್ರಾಹಕರಿಂದ ಸಂಗ್ರಹಿಸುತ್ತೇವೆ. ಬಿಎಂಟಿಸಿ ಬಸ್‌ಗಳಿ ಗಳಿಗೆ ರಿಯಾಯಿತಿ ನೀಡಿ ಅಂತಾ ಎಂಡಿಯಿಂದ ಎರಡು ಸಲ ಪತ್ರ ಬರೆದಿದ್ದಾರೆ. ಯಾವುದಕ್ಕೂ ಉತ್ತರ ಬಂದಿಲ್ಲ. ಹಾಗಾಗಿ ಇದು ಬಸ್‌ ದರ ಏರಿಕೆಯಲ್ಲ, ಟೋಲ್‌ ಸೇರಿಸುತ್ತಿದ್ದೇವೆ ಅಷ್ಟೇ ಎಂದು ಮಾಹಿತಿ ನೀಡಿದ್ದಾರೆ.ನೈಸ್‌ರೋಡ್‌ನಲ್ಲಿ ಟೋಲ್‌ ಹೆಚ್ಚಳ – ಯಾವುದಕ್ಕೆ ಎಷ್ಟು? 
* ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆವರೆಗಿನ 9 ಕಿಮೀ ಉದ್ದದ ಕಾರ್ ಟೋಲ್ 50 ರೂ. ನಿಂದ 60 ರೂ.ಗೆ ಹೆಚ್ಚಳ
* ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ 40 ರೂ. ನಿಂದ 45 ರೂ.ಗೆ ಹೆಚ್ಚಳ
* ಕಾರುಗಳಿಗೆ, ಟೋಲ್ ಶುಲ್ಕ 5 ರೂ.ನಿಂದ 10 ರೂ. ವರೆಗೆ ಹೆಚ್ಚಳ
* ಬಿಎಂಟಿಸಿ ಬಸ್ ಪ್ರತಿ ಟ್ರೀಪ್‌ಗೆ 675 ರೂ.ನಿಂದ 785 ರೂ. ವರೆಗೆ ಹೆಚ್ಚಳ
* ದ್ವಿಚಕ್ರ ವಾಹನ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ.Sign in to your account
Username or Email Address


Password

 Remember Me


