– ಇಂದು ಸಂಜೆ ದೆಹಲಿಗೆ ಯಾತ್ರಿಕರುಹಾವೇರಿ: ಉತ್ತರಾಖಂಡದಲ್ಲಿ (Uttarakhand) ಭೂಕುಸಿತ (Landslide) ಉಂಟಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಚಾರ್‌ಧಾಮ್ ಯಾತ್ರೆಗೆ (Char Dham Yatra) ತೆರಳಿದ್ದ ಕನ್ನಡಿಗರು ಇದೀಗ ಅಪಾಯದಿಂದ ಪಾರಾಗಿದ್ದಾರೆ.ಹಾವೇರಿ (Haveri) ಜಿಲ್ಲೆಯ ಚಿಕ್ಕೇರೂರು ಹಾಗೂ ತಿಳವಳ್ಳಿ ಗ್ರಾಮಗಳ 7 ಮಂದಿ ಕನ್ನಡಿಗರು (Kannadigas) ಚಾರ್‌ಧಾಮ್ ಯಾತ್ರೆಗೆಂದು ಜೂನ್ 29ರಂದು ಪ್ರವಾಸ ಆರಂಭಿಸಿದ್ದರು. ಬದರಿನಾಥನ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಉತ್ತರಾಖಂಡದ ಚೆಮೋಲಿ ಜಿಲ್ಲೆಯ ಜ್ಯೋಶಿಮಠ ಎಂಬ ಗ್ರಾಮದ ಬಳಿ ಭೂಕುಸಿತ ಉಂಟಾಗಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: 6 ತಿಂಗಳ ಹಿಂದೆ ಮೃತಪಟ್ಟಿದ್ದ ಅಧಿಕಾರಿಗೆ ವರ್ಗಾವಣೆ – ಪೌರಾಡಳಿತ ಇಲಾಖೆ ಯಡವಟ್ಟುಘಟನೆ ಹಿನ್ನೆಲೆ ತಮ್ಮನ್ನು ರಕ್ಷಿಸುವಂತೆ ಕನ್ನಡಿಗರು ವೀಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ರಸ್ತೆ ದುರಸ್ತಿಯಾದ ಹಿನ್ನೆಲೆ ಕನ್ನಡಿಗರು ಯಾವುದೇ ಅಪಾಯವಿಲ್ಲದೇ ವಾಪಸ್ ಆಗುತ್ತಿದ್ದಾರೆ. ಇಂದು ಸಂಜೆ ಎಲ್ಲಾ 7 ಯಾತ್ರಿಕರು ಸುರಕ್ಷಿತವಾಗಿ ದೆಹಲಿ ತಲುಪಲಿದ್ದಾರೆ. ಇದನ್ನೂ ಓದಿ: Assembly Bypolls: ಇಂಡಿಯಾ ಒಕ್ಕೂಟ 10, ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುನ್ನಡೆ7 ಮಂದಿ ಕನ್ನಡಿಗರ ವಿವರ:
ಶ್ರೀಧರ್ ಎಂ ಹೊಳಲ್ಕೇರಿ (62)2)
ಶಾಂತಾ ಎಸ್ ಹೊಳಲ್ಕೇರಿ (57)
ಅಶೋಕ್ ಎಸ್‌ವಿ (61)
ಭಾರತಿ ಎಎಸ್ (55)
ವೆಂಕಟೇಶ್ ಪಂಪನ್ (62)
ರಾಜೇಶ್ವರಿ ಪಂಪನ್ (60)
ರಾಹುಲ್ ಪಂಪನ್ (35)






 Advertisement 




Sign in to your account
Username or Email Address


Password

 Remember Me


