ಚಿತ್ರದುರ್ಗ: ಭಕ್ತರು ಉಡುಗೊರೆಯಾಗಿ ನೀಡಿದ್ದ ಮುರುಘಾಶ್ರೀ (Murughashri) ಬೆಳ್ಳಿ ಪ್ರತಿಮೆ ಕಳ್ಳರು ಕದ್ದೊಯ್ದಿರುವ ಕೃತ್ಯ ಚಿತ್ರದುರ್ಗ (Chitradurga) ಮುರುಘಾ ಮಠದಲ್ಲಿ ನಡೆದಿದೆ.ಸುಮಾರು 20 ಲಕ್ಷ ಮೌಲ್ಯದ ಬೆಳ್ಳಿ ಪ್ರತಿಮೆಯು 2021 ರಲ್ಲಿ ಮುರುಘಾಶ್ರೀಗೆ ಅವರ ಭಕ್ತರು ಉಡುಗೊರೆಯಾಗಿ ನೀಡಿದ್ದರು. ಪೋಕ್ಸೋ ಕೇಸಲ್ಲಿ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರನ್ನು ಆಡಳಿತಾಧಿಕಾರಿಯಾಗಿ ಸರ್ಕಾರ‌ ನೇಮಿಸಿದೆ. ಇದನ್ನೂ ಓದಿ: ದಲಿತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ: ವಿಜಯೇಂದ್ರಇದರ ಬೆನ್ನಲ್ಲೇ ಕಳೆದ ಜೂನ್ 26 ರಂದು ಮುರುಘಾ ಮಠದಲ್ಲಿನ ಸಭಾಂಗಣದಲ್ಲಿದ್ದ ಮುರುಘಾಶ್ರೀ ಬೆಳ್ಳಿ ಪ್ರತಿಮೆ ಕಳ್ಳತನವಾಗಿದೆ. ಆದರೆ ಈ ಪ್ರದೇಶಕ್ಕೆ ಯಾರಿಗೂ ಪ್ರವೇಶ ಇಲ್ಲದ ಹಿನ್ನೆಲೆಯಲ್ಲಿ ಯಾರು ಸಹ ಈ ಪ್ರತಿಮೆಯತ್ತ ಗಮನಿಸಿರಲಿಲ್ಲ‌. ಹೀಗಾಗಿ ಪ್ರಕರಣ ತಡವಾಗಿ ಮಠದ ಆಡಳಿತ ಸಮಿತಿ ಗಮನಕ್ಕೆ ಬಂದಿದೆ. ಈ ಕೃತ್ಯದಿಂದಾಗಿ ಇದ್ದ ಮೂವರಲ್ಲಿ ಕದ್ದವರು ಯಾರೆಂಬ ಪ್ರಶ್ನೆ ಮಠದ ಭಕ್ತರಲ್ಲಿ ಮೂಡಿದೆ.ಕಳ್ಳತನದ ಬಗ್ಗೆ ಹಲವು ಅನುಮಾನ ಮೂಡಿದ್ದು, ಮಠದ ಆಡಳಿತ ಸಮಿತಿ ಸದಸ್ಯರಾದ ಬಸವಕುಮಾರ ಶ್ರೀಗಳಿಗೆ ಉಸ್ತುವಾರಿ ಶ್ರೀಗಳಾಗಿದ್ದ ಬಸವಪ್ರಭು ಶ್ರೀಗಳು ಮಾಹಿತಿ ನೀಡಿದ‌ ಹಿನ್ನೆಲೆಯಲ್ಲಿ ಮಠದ ಭಕ್ತರು ಹಾಗೂ ಮುಖಂಡರೊಂದಿಗೆ ಆಂತರಿಕ ಚರ್ಚೆ ನಡೆಸಿದರು. ಕೃತ್ಯ ಕುರಿತು ಚರ್ಚಿಸಿದರು. ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ – ಬಿಪಿಎಲ್‌ ಕಾರ್ಡ್‌ದಾರರಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಿಸಲು ಸೂಚನೆ!ಈ ಚರ್ಚೆಯಲ್ಲಿ ಎಲ್ಲರೂ ದೂರು ನೀಡುವಂತೆ ಸೂಚಿಸಿದ್ದು, ಆಡಳಿತ ಸಮಿತಿ ಅಧ್ಯಕ್ಷರಾದ ಕಳಸದ್ ಅವರ ಗಮನಕ್ಕೆ ತರಲಾಗಿದೆ. ಆಡಳಿತ ಮಂಡಳಿಯ ಸದಸ್ಯ ಬಸವಕುಮಾರ ಶ್ರೀಗಳು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ದೂರು ನೀಡಲು ನಿರ್ಧರಿಸಿದರು. ಹಾಗೆಯೇ ಸಭಾಂಗಣದಲ್ಲಿನ ಸಿಸಿಟಿವಿ ಸಹ ಬಂದ್ ಆಗಿದ್ದು, ಈ ಬಗ್ಗೆ ಸೂಕ್ತ ತನಿಖೆ ಬಳಿಕವೇ ಸತ್ಯಾಸತ್ಯತೆ ಹೊರಬರಬೇಕೆಂದು ವಿರಕ್ತಮಠದ ಬಸವಪ್ರಭು ಶ್ರೀ ತಿಳಿಸಿದ್ದಾರೆ.ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಿಪಿಐ ಮುದ್ದುರಾಜ್ ನೇತೃತ್ವದಲ್ಲಿ ಮಠಕ್ಕೆ ಭೇಟಿ ನೀಡಿದ ಪೊಲೀಸರ ತಂಡ ಪ್ರಕರಣದ ಸ್ಥಳ ಪರಿಶೀಲನೆ ನಡೆಸಿತು. ಈ ವೇಳೆ ವೀರಶೈವ ಸಮಾಜದ ಮುಖಂಡರಾದ ಷಡಕ್ಷರಿ, ವೀರೇಂದ್ರ ಮತ್ತು ವಕೀಲರಾದ ಪ್ರತಾಪ್ ಇದ್ದರು.Sign in to your account
Username or Email Address


Password

 Remember Me


