ಬೀದರ್: ಇಡಿ, ಸಿಬಿಐ ಹಾಗೂ ಚುನಾವಣಾ ಆಯೋಗ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ (BJP) ದುರುಪಯೋಗ ಮಾಡಿಕೊಳ್ಳತ್ತಿದೆ ಎಂದು ಇಡೀ ದೇಶವೇ ಮಾತಾಡುತ್ತಿದೆ ಎಂದು ಸಚಿವ ಈಶ್ವರ್ ಖಂಡ್ರೆ  (Eshwara Khandre) ಹೇಳಿದ್ದಾರೆ.ಬೀದರ್‌ನಲ್ಲಿ (Bidar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣ (Valmiki corporation scam) ಸಂಬಂಧ ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಹೇಳುತ್ತಿದೆ. ನಮ್ಮ ಪೊಲೀಸರು ಸಮರ್ಥರಿಲ್ವಾ? ನಮ್ಮ ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡತ್ತಾರೆ. ನಮ್ಮ ಪೊಲೀಸರ ಬಗ್ಗೆ ನಮಗೆ ನಂಬಿಕೆ ಇದೆ. ಬಿಜೆಪಿ ಸರ್ಕಾರ ಇದ್ದಾಗ ನಾವು ಅನೇಕ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದಿದ್ದೆವು ಆಗ ಅವರು ಕೊಟ್ರಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗೆ ಪರಿಶಿಷ್ಟರ ಹಣ ಬಳಕೆ – ಮಧ್ಯಪ್ರವೇಶ ಮಾಡಿ ವರದಿ ಕೇಳಿದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಪ್ರಕರಣದ ತನಿಖೆಯಲ್ಲಿ ಸರ್ಕಾರದ ಯಾವುದೇ ಒತ್ತಡ ಹಾಗೂ ಹಸ್ತಕ್ಷೇಪ ಮಾಡಿಲ್ಲ. ತನಿಖೆಯ ಬಳಿಕ ಸತ್ಯ ಹೊರಗೆ ಬರಲಿದೆ. ಪಾರದರ್ಶಕವಾಗಿ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮವಾಗಲಿದೆ. ಈ ಪ್ರಕರಣಕ್ಕೆ ರಾಜಕೀಯ ಲೇಪನ ಮಾಡುವುದು ಬೇಡ ಎಂದು ಅವರು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.ಮುಡಾ ಅಕ್ರಮ ಪ್ರಕರಣದಲ್ಲಿ (MUDA Scam) ಸಿಎಂ ವಿರುದ್ಧ ಎಫ್‍ಐಆರ್ ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ, ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಬಿಜೆಪಿ ರಾಜಕೀಯ ದುರುದ್ದೇಶದಿಂದ ಈ ರೀತಿ ಅಪಪ್ರಚಾರ ಮಾಡುತ್ತಿದೆ. ಇದನ್ನೂ ನಾವು ಸಹಿಸುವುದಿಲ್ಲ. ಸುಳ್ಳನ್ನು ನೂರು ಸರಿ ಹೇಳಿದರೂ ಅದು ಸತ್ಯವಾಗಲು ಸಾದ್ಯವಿಲ್ಲ. ಚುನಾವಣೆಯ ಸೋಲಿನಿಂದಾಗಿ ಬಿಜೆಪಿಗರು ಹೀಗೆ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.ದೇವದುರ್ಗದಲ್ಲಿ ಜನ ಚಿರತೆಯನ್ನು ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನ ಆತಂಕದಿಂದ ಹೀಗೆ ಮಾಡಿದ್ದಾರೆ. ಜನರಿಗೆ ಜಾಗೃತಿ ಬೇಕು. ಈ ಪ್ರಕರಣದಲ್ಲಿ ಯಾವ ಅಧಿಕಾರಿಗಳಿಗೂ ನಾವು ಕ್ಲೀನ್ ಚಿಟ್ ಕೊಟ್ಟಿಲ್ಲ. ತನಿಖಾ ವರದಿ ಬಂದ ನಂತರ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ.31.02 ವಿದ್ಯಾರ್ಥಿಗಳು ಪಾಸ್‌Sign in to your account
Username or Email Address


Password

 Remember Me


