ಬೆಂಗಳೂರು: ಮುಡಾ ಸೈಟ್ (MUDA Site) ವಾಪಾಸ್ ನೀಡಿರುವುದು ಒಳ್ಳೆಯ ನಿರ್ಧಾರ ಎಂದು ಸಿಎಂ ಪತ್ನಿ ಮುಡಾ ಸೈಟ್ ವಾಪಸ್ ನೀಡಿರುವ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ( G.Parameshwar) ಹೇಳಿದ್ದಾರೆ.ಇದನ್ನೂ ಓದಿ: ನಟ ಗೋವಿಂದ ಕಾಲಿಗೆ ಗುಂಡೇಟು – ಆಸ್ಪತ್ರೆಗೆ ದಾಖಲು : ಆಗಿದ್ದೇನು?ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ಮನೆಯಲ್ಲಿ ಯಜಮಾನರಿಗೆ ತೊಂದರೆ ಆಗುತ್ತಿದೆ ಅಥವಾ ತೇಜೋವಧೆ ಆಗುತ್ತಿದೆ ಎನ್ನವುದು ಅವರಿಗೆ ಗೊತ್ತಾಗಿದೆ. ಅದಕ್ಕಾಗಿ ವಾಪಸ್ ಮಾಡುತ್ತೇನೆ ಎಂದಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ ಅನಿಸುತ್ತದೆ. ತನಿಖೆ ಇರಲಿ ಆಪಾದನೆ ಬಂದ ತಕ್ಷಣ ಇದು ಸತ್ಯ ಆಗುವುದಿಲ್ಲ. ಆದರೆ ಇಷ್ಟು ದಿನ ರಾಜಕೀಯಕ್ಕೆ ಉಪಯೋಗಿಸುತ್ತಿದ್ದಾರೆ ಎನ್ನುವುದು ಅವರ ಅಭಿಪ್ರಾಯ ಅಷ್ಟೇ ಎಂದರು.ಕಾನೂನು ದೃಷ್ಟಿಯಲ್ಲಿ ಮುಂದೆ ಏನಾಗುತ್ತದೆ ಗೊತ್ತಿಲ್ಲ. ಸರೆಂಡರ್ ಮಾಡಿದ ಮೇಲೆ ಏನಾಗುತ್ತದೆ ಎಂದು ಗೊತ್ತಿಲ್ಲ. ರಾಜಕೀಯಕ್ಕೆ ಉಪಯೋಗ ಮಾಡುತ್ತಿದ್ದಾರೆ. ನನಗೆ ಮರ್ಯಾದೆ ಮುಖ್ಯ ಅನ್ನುವುದು ಅವರ ಭಾವನೆಯಾಗಿದೆ. ಹಾಗಾಗಿಯೇ ಮುಡಾ ಸೈಟುಗಳನ್ನು ವಾಪಸ್ ನೀಡಿದ್ದಾರೆ. ಆದರೆ ಮುಡಾ (MUDA Scam) ವಿಚಾರ ಬಿಜೆಪಿಯವರಿಗೆ (BJP) ರಾಜಕೀಯಕ್ಕೆ ಉಪಯೋಗ ಆಗುತ್ತಿದೆ ಎನ್ನುವುದು ಖಾತ್ರಿಯಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಅಂದು ಹುಬ್ಲೋಟ್‌ ವಾಚ್‌, ಇಂದು ಮುಡಾ ಸೈಟ್‌ಗಳು! – ಭಾರೀ ಚರ್ಚೆಗೆ ಗ್ರಾಸವಾಗಿದ್ದ ಗಿಫ್ಟ್‌Sign in to your account
Username or Email Address


Password

 Remember Me


