ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರ ರಿಲೀಸ್ ಆದಾಗಿನಿಂದಲೂ ಬಾಕ್ಸಾಫೀಸ್‌ನಲ್ಲಿ ಬರೆದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಹೀಗಿರುವಾಗ ಈದ್ ಹಬ್ಬದ ದಿನವೂ `ಕೆಜಿಎಫ್ 2′ ಟೀಮ್ ಭರ್ಜರಿ ಗಿಫ್ಟ್ ಸಿಕ್ಕಿದೆ. ಬಾಕ್ಸಾಆಫೀಸ್‌ನಲ್ಲಿ 20ನೇ ದಿನವೂ ಕೂಡ ಬರೋಬ್ಬರಿ 9.57 ಕೋಟಿ ಲೂಟಿ ಮಾಡಿದೆ.ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ಚಿತ್ರ `ಕೆಜಿಎಫ್ 2′ ಸಿನಿಮಾ ರಿಲೀಸ್ ಆಗಿ 20 ದಿನಗಳು ಕಳೆದರು ಚಿತ್ರದ ಹೈಫ್ ಒಂದಚೂರು ಕಮ್ಮಿಯಾಗಿಲ್ಲ. ಹಿಂದಿಯಲ್ಲಿ ರಿಲೀಸ್ ಆಗಿರುವ ಚಿತ್ರಗಳು ಮೊದಲ ದಿನವೇ ಕಲೆಕ್ಷನ್ ಹೆಣಗಾಡುತ್ತಿದ್ದರೆ, ಯಶ್ ಸಿನಿಮಾ ಲಗಾಮ್‌ಯಿಲ್ಲದೇ ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. 20ನೇ ದಿನ ಅಂದ್ರೆ ಮೇ 3 ಈದ್ ಹಬ್ಬದಂದು 9.57 ಕೋಟಿ ಕಲೆಕ್ಷನ್ ಮಾಡಿದೆ ಜತೆಗೆ ಬಾಲಿವುಡ್ ಖಜಾನೆಯಲ್ಲಿ 382.90 ಕೋಟಿ ಲೂಟಿ ಮಾಡಿದೆ.ಇನ್ನು ಮೇ 3 ಈದ್ ಹಬ್ಬವಿದ್ದು, ರಜೆ ಇದ್ದದರಿಂದ ಸಾಕಷ್ಟು ಅಭಿಮಾನಿಗಳು ಸಿನಿಮಾ ವೀಕ್ಷಿಸಿದ್ದಾರೆ. ಇದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಒಟ್ಟು 382.90 ಕೋಟಿ ಕಲೆಕ್ಷನ್ 400 ಕೋಟಿಯತ್ತ ಮುನ್ನಗುತ್ತಿದೆ. ಅಷ್ಟೇ ಅಲ್ಲ ವರ್ಲ್ಡ್ ವೈಡ್ 1000 ಸಾವಿರಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಜೊತೆ ಬಾಲಿವುಡ್ ಬ್ಯಾಡ್ ಬಾಯ್ ಡಾನ್ಸ್#KGF2 is the biggest beneficiary on #Eid holiday… Biz, expectedly, jumps again… Should cross #Dangal today [third Wed]… Countdown begins for ₹ 400 cr… [Week 3] Fri 4.25 cr, Sat 7.25 cr, Sun 9.27 cr, Mon 3.75 cr, Tue 9.57 cr. Total: ₹ 382.90 cr. #India biz. #Hindi pic.twitter.com/TYgd5a25Lb— taran adarsh (@taran_adarsh) May 4, 2022`ಕೆಜಿಎಫ್ 2′ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರು ನೇಮು ಫೇಮು ಗಿಟ್ಟಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್, ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇನ್ನು ಹೊಂಬಾಳೆ ಬ್ಯಾನರ್ ಕೂಡ ಭರ್ಜರಿ ಲಾಭ ಮಾಡಿಕೊಂಡಿದ್ದಾರೆ. ಒಟ್ನಲ್ಲಿ ಕನ್ನಡದ ಈ ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲೂ ಚಿತ್ರ ಹಿಟ್ ಆಗಿದೆ. ಇನ್ನು ಅಭಿಮಾನಿಗಳು ಕಾತರದಿಂದ ಕೆಜಿಎಫದದ 3ಗಾಗಿ ಎದುರು ನೋಡ್ತಿದ್ದಾರೆ.Sign in to your account
Username or Email Address


Password

 Remember Me


