ಬೆಂಗಳೂರು: ಡೈಮಂಡ್ ಉದ್ಯಮಿಯನ್ನು ಸಿನಿಮಿಯ ರೀತಿಯಲ್ಲಿ ಅಪಹರಣ ಮಾಡಿದ್ದ ನಾರಾಯಣ್ ಹಾಗೂ ಆತನ ಸಹಚರರು ಪೊಲೀಸರು ಬಂಧಿಸಿದ್ದಾರೆ.ನಾರಾಯಣ್ ಸಿನಿಮಾದಲ್ಲಿ ಖಳನಟನಾಗಿ ಅಭಿನಯಿಸಿದ್ದ. ವೀರಪರಂಪರೆ ಸೇರಿದಂತೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದಾನೆ.ನಾರಾಯಣ್ ಮತ್ತು ಆತನ ಸಹಚರರು ಮಂಡ್ಯ ಮೂಲದ ವಜ್ರ ವ್ಯಾಪಾರಿಯನ್ನು ಬೆಂಗಳೂರಿನ ಯುಬಿ ಸಿಟಿ ಬಳಿ ಅಪಹರಿಸಿ ರಾತ್ರಿಯೆಲ್ಲಾ ಬೆಂಗಳೂರು ಸುತ್ತಾಡಿಸಿದ್ದಾರೆ. ಕಳೆದ ತಿಂಗಳು 21ರಂದು ಈ ಘಟನೆ ನಡೆದಿದ್ದು, ನಾರಾಯಣ್ ಮತ್ತು ಆತನ ಸಹಚರರು ಮರುದಿನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯನ್ನು ಬಿಟ್ಟು ಹೋಗಿದ್ದರು. ಬಳಿಕ ಉದ್ಯಮಿ ಹೈಗ್ರೌಂಡ್ಸ್ ಠಾಣೆಯಲ್ಲೇ ದೂರು ದಾಖಲಿಸಿದ್ದರು. ಇದನ್ನೂ ಓದಿ: ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಗ್ರೌಂಡ್ಸ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರಿಂದ ಬಂಧಿತ ಮೂವರು ಆರೋಪಿಗಳನ್ನು 7 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್Sign in to your account
Username or Email Address


Password

 Remember Me


