ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಪಾಗಲ್ ಪ್ರೇಮಿ ಆ್ಯಸಿಡ್ ನಾಗ ಅಲಿಯಾಸ್ ನಾಗೇಶ್ ಹುಡುಕಾಟಕ್ಕಾಗಿ ಕಳೆದ 6 ದಿನಗಳಿಂದಲೂ ಶೋಧ ನಡೆಸುತ್ತಿದ್ದಾರೆ. ಹೊರರಾಜ್ಯದ ದೊಡ್ಡ-ದೊಡ್ಡ ದೇವಸ್ಥಾನಗಳು, ಮಠಗಳು, ಧಾರ್ಮಿಕ ಕೇಂದ್ರಗಳಲ್ಲಿ ಇರುವುದಾಗಿ ಶಂಕೆ ವ್ಯಕ್ತವಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.ಈ ನಡುವೆ ನಾಗೇಶ್ ತಾನು ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್‌ನಲ್ಲಿ ಆಪ್ತ ಸ್ನೇಹಿತರೊಂದಿಗೆ ಹೇಳಿಕೊಂಡಿದ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿದೆ. ಗಾರ್ಮೆಂಟ್ಸ್ ಆಪ್ತ ಸ್ನೇಹಿತರ ಬಳಿ, ನಾನು 20 ದಿನ ಇರೋದಿಲ್ಲ. ಮನಃ ಶಾಂತಿಗಾಗಿ ಹೊರಗೆ ಹೋಗ್ತಿದ್ದೀನಿ ಎಂದು ಹೇಳಿದ್ದಾನೆ. ಸ್ನೇಹಿತರು ಎಲ್ಲಿಗೆ ಟ್ರಿಪ್ ಹೋಗ್ತಿದ್ದೀಯಪ್ಪ? ಎಂದು ಕೇಳಿದ್ದಕ್ಕೆ ಟಿವಿ-ಪೇಪರ್ ನಲ್ಲಿ ಬರುತ್ತೆ ನೋಡಿ ಎಂದಿದ್ದನಂತೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್
ಅಲ್ಲಿಗೆ ಈತ 20 ದಿನಗಳ ಮೊದಲೇ ಆ್ಯಸಿಡ್ ದಾಳಿ ನಡೆಸಲು ಪ್ಲಾನ್ ಮಾಡಿಕೊಂಡಿದ್ದ. ಇವೆಲ್ಲಾ ಪಕ್ಕಾ ಪ್ಲಾನ್ ಮಾಡಿ ಮಾಡಿರೋ ಕೆಲಸಗಳು ಗೊತ್ತಾಗಿದೆ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದರೆ, ವಿಚಾರಣೆ ವೇಳೆ ಸಿಕ್ಕಿಬೀಳುತ್ತೇನೆಂದು ಕೈಯಲ್ಲಿದ್ದ 1 ಲಕ್ಷ ಕ್ಯಾಶ್ ತೆಗೆದುಕೊಂಡು ಮೊಬೈಲ್ ಬಳಸದೆ, ಆನ್‌ಲೈನ್ ವಹಿವಾಟು ನಡೆಸದೆ, ಕುಟುಂಬದೊಂದಿಗೂ ಸಂಪರ್ಕದಲ್ಲಿರದೆ ಪರಾರಿಯಾಗಿರುವ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿSign in to your account
Username or Email Address


Password

 Remember Me


