ಬಳ್ಳಾರಿ: ಖಾಲಿ ನಿವೇಶನ ತೆರವು ಮಾಡುವ ವಿಚಾರದಲ್ಲಿ ಕೊಲೆಗೆ ಯತ್ನ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆ ಕಾಂಗ್ರೆಸ್ ಮುಖಂಡನನ್ನು ಪೊಲೀಸರು ಬಂಧನ ಮಾಡಿದ್ದಾರೆ.ಬಳ್ಳಾರಿ ಮಹಾನಗರ ಪಾಲಿಕೆ 14ನೇ ವಾರ್ಡ್‍ನ ಸದಸ್ಯೆಯ ಪತಿ ಬಿ.ಆರ್.ಎಲ್.ಸೀನಾ ಅವರನ್ನು ಬಳ್ಳಾರಿ ಬ್ರೂಸ್ ಪೇಟ್ ಪೊಲೀಸರು ಬಂಧನ ಮಾಡಿದ್ದಾರೆ. ಬಳ್ಳಾರಿ ಗುಗ್ಗರಹಟ್ಟಿ ನಿವಾಸಿ ಕೆ.ವೆಂಕಟೇಶ್ ದೂರು ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಸೀನಾ ಅವರನ್ನು ಬಂಧಿಸಲಾಗಿದೆ.ಖಾಲಿ ನೀವೇಶನ ತೆರವು ವಿಚಾರಕ್ಕೆ, ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಆರೋಪಿಸಿ ವೆಂಕಟೇಶ್ ಅವರು ಬಳ್ಳಾರಿ ಬ್ರೂಸ್ ಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣ ವಿಚಾರಣೆ ನಡೆಸಿ, ಬಿ.ಆರ್.ಎಲ್.ಸೀನಾ ಅವರನ್ನು ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಟ್ವೀಟ್ ಬಯೋದಿಂದ ‘ಕೈ’ ಚಿಹ್ನೆ ಬಿಟ್ಟ ಹಾರ್ದಿಕ್ ಪಟೇಲ್ ನಡೆದಿದ್ದೇನು?
ಸೀನಾ ಅವರು ವೆಂಕಟೇಶ್ ಅವರಿಗೆ ನಿವೇಶನ ಖಾಲಿ ಮಾಡುವಂತೆ ಒತ್ತಾಯ ಮಾಡಿ, ಖಾಲಿ ಬಾಂಡ್ ಮೇಲೆ ಸಹಿ ಮಾಡಿಸಿಕೊಂಡಿದ್ದರು. ಅಲ್ಲದೇ ಕಾರ್‌ನಲ್ಲಿ ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.Sign in to your account
Username or Email Address


Password

 Remember Me


