ಒಂದಿಲ್ಲೊಂದು ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಸದಾ ಸುದ್ದಿಯಲ್ಲಿರುವ ಕಂಗನಾ ರಣಾವತ್, ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ‘ಪುರುಷ ಪ್ರಧಾನ ಸಿನಿಮಾ ರಂಗದಲ್ಲಿ ನಾನು ಯಾವತ್ತೂ ಕಡಿಮೆ ಸಂಭಾವನೆ ಪಡೆದಿಲ್ಲ. ನನಗೆ ಮಹತ್ವ ಇಲ್ಲದ ಪಾತ್ರಗಳನ್ನೇ ಕಠೋರವಾಗಿಯೇ ತಿರಸ್ಕರಿಸಿದ್ದೇನೆ’ ಎಂದು ಹೇಳುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿನಾನು ಸಿನಿಮಾ ರಂಗಕ್ಕೆ ಬಂದಾಗ ಅನೇಕ ಪುರುಷರು ನನಗೆ ಸಹಾಯ ಮಾಡಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿದ್ದೇನೆ. ಮಹಿಳೆಯರಿಗೆ ಕಡಿಮೆ ಸಂಭಾವನೆ ಕೊಡುತ್ತಿರುವುದು ನಿಜ. ಅದು ಅವರವರ ಆಯ್ಕೆ. ಆದರೆ, ನಾನಂತೂ ಕಡಿಮೆ ಸಂಭಾವನೆಗೆ ಚಿತ್ರಗಳನ್ನು ಒಪ್ಪಿಕೊಂಡಿಲ್ಲ ಎಂದಿರುವ ಕಂಗನಾ ರಣಾವತ್, ಖಾನ್ ಮತ್ತು ಕುಮಾರ್ ಪ್ರಧಾನ ಚಿತ್ರಗಳನ್ನು ತಿರಸ್ಕರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿಮೊದ ಮೊದಲು ಸಂಭಾವನೆ ವಿಚಾರದಲ್ಲಿ ಅವರಿಗೂ ಅನ್ಯಾಯವಾಗಿದೆಯಂತೆ. ಹಾಗಂತ ಅದನ್ನೇ ಅವರು ಮುಂದುವರೆಸಿಕೊಂಡು ಹೋಗಲಿಲ್ಲವಂತೆ. ನನ್ನ ಪ್ರತಿಭೆಯ ಮೇಲೆ ನಂಬಿಕೆ ಇರುವಾಗ, ನಾವೂ ಕೂಡ ಸಂಭಾವನೆಯನ್ನು ಡಿಮಾಂಡ್ ಮಾಡಬೇಕು. ಪುರುಷರಷ್ಟೇ ಮಹಿಳೆಗೂ ಸಂಭಾವನೆ ಸಿಗಬೇಕು ಎಂದು ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್ಕಂಗನಾ ಕೇವಲ ನಟಿಯಾಗಿ ಸದ್ಯ ಉಳಿದಕೊಂಡಿಲ್ಲ. ಸಿನಿಮಾವೊಂದನ್ನು ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಟಿಕು ವೆಡ್ಸ್ ಶೇರು ಹೆಸರಿನ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನವಾಜುದ್ದೀನ್ ಸಿದ್ದಕಿ, ಅವನೀತ್ ಕೌರ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ, ಹಲವು ಚಿತ್ರಗಳಿಗೂ ಇವರು ನಿರ್ಮಾಪಕಿಯೂ ಆಗಿದ್ದಾರೆ.Sign in to your account
Username or Email Address


Password

 Remember Me


