`ಕೆಜಿಎಫ್ 2′ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದೆ ವಿನಃ ಕಮ್ಮಿ ಆಗುವ ಸೂಚನೆನೆ ಕಾಣುತ್ತಿಲ್ಲ. ಇನ್ನು ರಾಕಿಭಾಯ್ ಅಬ್ಬರಕ್ಕೆ ಹಿಂದಿ ಸಿನಿಮಾಗಳು ಮಕಾಡೆ ಮಲಗಿದೆ. ಹೀಗಿರುವಾಗ ಯಶ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 369.58 ಬಾಚಿ 400 ಕೋಟಿ ಕ್ಲಬ್ ಮಾಡುವತ್ತ ಮುನ್ನುಗುತ್ತಿದೆ.ಪ್ರಶಾಂತ್ ನೀಲ್ ಮತ್ತು ಯಶ್ ನಟನೆಯ `ಕೆಜಿಎಫ್’ ಸಿನಿಮಾ ಸಖತ್ ಹಿಟ್ ಆಗಿತ್ತು. ಈಗ `ಕೆಜಿಎಫ್ 2′ ಸಿನಿಮಾ ಚಾಪ್ಟರ್ ಒನ್‌ಗಿಂತ ಮೂರು ಪಟ್ಟು ಜಾಸ್ತಿಯೇ ಗಳಿಕೆ ಮಾಡುತ್ತಿದೆ. ರಾಕಿಭಾಯ್ ಎಂಟ್ರಿಗೆ ಬಾಲಿವುಡ್ ಸಿನಿಮಾಗಳೇ ನಲುಗಿ ಹೋಗಿದೆ. ಈ ಹಿಂದಿನ ಚಿತ್ರಗಳು ಮಾಡಿರುವ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿ `ಕೆಜಿಎಫ್ 2′ ಟಾಪ್ ಸ್ಥಾನದಲ್ಲಿದೆ. ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 18ನೇ ದಿನದ ಕಲೆಕ್ಷನ್ 369.58 ಕೋಟಿ ಲೂಟಿ ಮಾಡಿ, 400 ಕೋಟಿ ಗಳಿಕೆ ಮಾಡುವತ್ತ ಮುನ್ನುಗುತ್ತಿದೆ.ಅಜಯ್ ದೇವಗನ್ ನಿರ್ದೇಶಿಸಿ, ನಟಿಸಿರುವ `ರನ್‌ವೇ 24′ ಮತ್ತು ಟೈಗರ್ ಶ್ರಾಫ್ ನಟನೆಯ `ಹೀರೋಪಂತಿ 2′ ಸಾಧಾರಣ ಕಲೆಕ್ಷನ್ ಮಾಡುತ್ತಿದೆ. `ಕೆಜಿಎಫ್ 2′ ಚಿತ್ರ ತೆರೆಕಂಡು 18 ದಿನಗಳಾದ್ರು ರಾಕಿಭಾಯ್ ಓಟ ಮಾತ್ರ ನಿಂತಿಲ್ಲ. ಈಗಾಗಲೇ ಯಶ್ ಚಿತ್ರದ ವರ್ಲ್ಡ್ ವೈಡ್ ಕಲೆಕ್ಷನ್ 1000 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ: ಖಾನ್ ಸಿನಿಮಾಗಳನ್ನು ತಿರಸ್ಕರಿಸಿದ್ದೇನೆ: ಬಾಂಬ್ ಸಿಡಿಸಿದ ಕಂಗನಾ ರಣಾವತ್#KGF2 remains the first choice of moviegoers, despite two new titles taking away a chunk of screens, shows and footfalls… Should cross #Dangal during #Eid holidays… [Week 3] Fri 4.25 cr, Sat 7.25 cr, Sun 9.27 cr. Total: ₹ 369.58 cr. #India biz. #Hindi pic.twitter.com/UkOLMVexSU— taran adarsh (@taran_adarsh) May 2, 2022`ಕೆಜಿಎಫ್ 2′ ತೆರೆಕಂಡು ಮೂರು ವಾರವಾದ್ರು ನಿಲ್ಲದ ರಾಕಿಭಾಯ್ ಓಟ ನೋಡಿ ಇಡೀ ಚಿತ್ರರಂಗವೇ ಊಘೇ ಊಘೇ ಅಂತಿದೆ. ಒಟ್ನಲ್ಲಿ ಪ್ರಶಾಂತ್‌ನೀಲ್ ಡೈರೆಕ್ಷನ್, ಯಶ್ ಮತ್ತು ಶ್ರೀನಿಧಿ ಶೆಟ್ಟಿ ಆಕ್ಟಿಂಗ್ ನೋಡಿ ಕಣ್ತುಂಬಿಕೊಡಿರೋ ಅಭಿಮಾನಿಗಳು ಈಗ ಕೆಜಿಎಫ್ 3ಗಾಗಿ ಕಾಯ್ತಿದ್ದಾರೆ.Sign in to your account
Username or Email Address


Password

 Remember Me


