`ಸಲಗ’ ಭರ್ಜರಿ ಸಕ್ಸಸ್ ನಂತರ ಭೀಮನ ಅವತಾರವೆತ್ತಿ ಟಾಲಿವುಡ್ ಲೆಜೆಂಡ್ ಬಾಲಯ್ಯ ಜತೆ ಅಖಾಡಕ್ಕೆ ಇಳಿದಿದ್ದಾರೆ. ಬಾಲಯ್ಯ ಮತ್ತು ದುನಿಯಾ ವಿಜಯ್ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ಪವರ್‌ಫುಲ್ ಟೈಟಲ್ ಕೂಡ ಫಿಕ್ಸ್ ಆಗಿದೆ.ದುನಿಯಾ ವಿಜಯ್ ಅಭಿನಯದ `ಸಲಗ’ ಸೂಪರ್ ಸಕ್ಸಸ್ ನಂತರ ಇದೀಗ `ಭೀಮ’ ಚಿತ್ರದ ನಿರ್ದೇಶನದ ಜವಬ್ದಾರಿ ಕೂಡ ಕೈಗೆತ್ತಿಕೊಂಡಿದ್ದಾರೆ. ನಟನಾಗಿ ಕಮ್ ನಿರ್ದೇಶಕನಾಗಿ ಪಳಗಿರೋ ವಿಜಯ್‌ಗೆ ತೆಲುಗು ಚಿತ್ರರಂಗ ರೆಡ್ ಕಾರ್ಪೆಟ್ ಹಾಕಿ ಕರೆಯುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಚಿತ್ರಕ್ಕೆ ದುನಿಯಾ ವಿಜಯ್ ಪ್ರಮುಖ ಪಾತ್ರಕ್ಕೆ ಜೀವ ತುಂಬ್ತಿದ್ದಾರೆ. ಬಾಲಯ್ಯ ನಟನೆಯ ಹೊಸ ಸಿನಿಮಾಗೆ `ಅಣ್ಣಗಾರು’ ಅನ್ನೋ ಪವರ್‌ಫುಲ್ ಟೈಟಲ್ ಇಡಲಾಗಿದೆ.`ಅಖಂಡ’ ಬ್ಲಾಕ್ ಬಸ್ಟರ್ ಸಕ್ಸಸ್ ನಂತರ ಎಂದೂ ಮಾಡಿರದ ಡಿಫರೆಂಟ್ ಪಾತ್ರದಲ್ಲಿ ಬರಲು ಬಾಲಯ್ಯ ಸಜ್ಜಾಗಿದ್ದಾರೆ. ಇನ್ನು ಗೋಪಿಚಂದ್ ಮಲಾನೇನಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಬಾಲಯ್ಯ ನಟನಯೆ 107ನೇ ಚಿತ್ರಕ್ಕೆ `ಅಣ್ಣಗಾರು’ ಟೈಟಲ್ ಕೂಡ ಫಿಕ್ಸ್ ಫೈನಲ್ ಆಗಿದೆ. ಬಾಲಯ್ಯಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಇದನ್ನೂ ಓದಿ: ಕಾಜಲ್ ಜೊತೆ ಶಾರುಖ್ ಖಾನ್ ಮತ್ತೆ ರೊಮ್ಯಾನ್ಸ್`ಅಣ್ಣಗಾರು’ ಪವರ್‌ಫುಲ್ ಟೈಟಲ್ ಮೂಲಕ ಬಾಲಯ್ಯ ಮತ್ತು ದುನಿಯಾ ವಿಜಯ್ ಬರುತ್ತಿದ್ದಾರೆ. ಸದ್ಯದಲ್ಲೇ ಚಿತ್ರತಂಡದಿಂದ ಟೈಟಲ್ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ. ಲೆಜೆಂಡರಿ ಆಕ್ಟರ್ ಬಾಲಯ್ಯ ಮತ್ತು ದುನಿಯಾ ವಿಜಯ್ ನಟನೆಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.Sign in to your account
Username or Email Address


Password

 Remember Me


