ಬಾಲಿವುಡ್ ಸಿನಿಮಾ ರಂಗದಲ್ಲಿ ಖ್ಯಾತಿ ಜ್ಯೋತಿಷಿ ಎಂದೇ ಗುರುತಿಸಿಕೊಂಡಿರುವ ಸಂಜಯ್ ಬಿ ಜುಮ್ಮಾನಿ ಇದೀಗ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಕೇಲವ ಮೂರೇ ಮೂರು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎರಡನೇ ಮಗುವಿನ ಪಾಲಕರಾಗಲಿದ್ದಾರಂತೆ. ನಿನ್ನೆಯಷ್ಟೇ 34ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಅನುಷ್ಕಾ ತಮ್ಮ 37 ಅಥವಾ 38ನೇ ವಯಸ್ಸಿನಲ್ಲಿ ತಾಯಿಯಾಗಲಿದ್ದಾರೆ ಎಂದು ಈ ಸಂಖ್ಯಾ ಶಾಸ್ತ್ರಜ್ಞ ತಿಳಿಸಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ಅನುಷ್ಕಾ ಮದುವೆಯಾದರು. ಮದುವೆಯ ನಂತರವೂ ಅವರು ಸಿನಿಮಾಗಳಲ್ಲಿ ಬ್ಯುಸಿಯಾದರು. ಈ ವೇಳೆಯಲ್ಲಿ ಅನುಷ್ಕಾ ಶರ್ಮಾ ತಾಯಿಗೆ ಇದೇ ಸಂಖ್ಯಾಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದರಂತೆ. ಅನುಷ್ಕಾ ಕೆರಿಯರ್ ನಲ್ಲಿ ಬ್ಯುಸಿ ಆಗಿರುವಾಗ ಮಗು ಮಾಡಿಕೊಳ್ಳಲು ಸಾಧ್ಯವೇ ಇಲ್ಲವೆಂದು ಅನುಷ್ಕಾ ತಾಯಿ ಹೇಳಿದ್ದರಂತೆ. ಆದರೆ, ಜ್ಯೋತಿಷಿ ಮಾತಿನಂತೆಯೇ ಅನುಷ್ಕಾ ಮಗು ಮಾಡಿಕೊಂಡರು ಎಂದು ಸಂಜಯ್ ಬಿ ಜುಮ್ಮಾನಿ ಮಾತನಾಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿಈಗ ಹೇಳಿರುವ ಜ್ಯೋತಿಷ್ಯ ಕೂಡ ಯಾವುದೇ ಕಾರಣಕ್ಕೂ ಸುಳ್ಳಾಗದು. ಅವರು ಇನ್ನೂ ಮೂರು ವರ್ಷದಲ್ಲಿ ಎರಡನೇ ಮಗುವಿಗೆ ತಾಯಿ ಆಗಲಿದ್ದಾರೆ. ಅನುಷ್ಕಾ ಶರ್ಮಾ ನಂತರವೂ ತಮ್ಮ ಕೆರಿಯರ್ ನಲ್ಲೇ ಮುಂದುವರೆಯಲಿದ್ದಾರೆ ಎಂದು ಸಂಜಯ್ ಹೇಳಿದ್ದಾರೆ. ಈ ಮಾತು ಸುಳ್ಳಾಗದು ಎಂದೂ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್ನಿನ್ನೆಯಷ್ಟೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಅನುಷ್ಕಾ ಶರ್ಮಾ, ಹೆಂಡತಿಯ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇಡೀ ಕುಟುಂಬ ಒಂದಾಗಿ ಸಂಭ್ರಮಿಸಿದೆ. ಆ ಫೋಟೋಗಳನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಇನ್ಸ್ಟಾ ಪೇಜ್ ನಲ್ಲಿ ಹಂಚಿಕೊಂಡಿದ್ದು. ‘ನೀನು ಹುಟ್ಟಿದಕ್ಕೆ ಆ ಭಗವಂತನಿಗೆ ಧನ್ಯವಾದ ಹೇಳುತ್ತೇನೆ. ನೀನಿಲ್ಲದಿದ್ದರೆ ನಾನು ಏನಾಗಿರುತ್ತಿದ್ದೆನೋ ಗೊತ್ತಿಲ್ಲ’ ಎಂದು ಭಾವುಕರಾಗಿಯೂ ವಿರಾಟ್ ಬರೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


