ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್‌ಗೆ ಇಂದು ವಿಶೇಷ ದಿನ. ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ ಆಗಿ ನಾಲ್ಕು ವರ್ಷಗಳು ಕಳೆದಿದ್ದು, ಇದೀಗ ಪತಿ ನೆನಪಿನಲ್ಲೇ ಚಿರು ಜತೆಗಿನ ಫೋಟೋ ಶೇರ್ ಮಾಡಿ, ಪತಿಯ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಹತ್ತು ವರ್ಷಗಳ ನಂತರ 5 ವರ್ಷಗಳ ಪ್ರೀತಿ ಮದುವೆಯೆಂಬ ಮುನ್ನುಡಿ ಬರೆದಿತ್ತು. ಪರಸ್ಪರ ಪ್ರೀತಿಸಿ 2018 ಮೇ 2ರಂದು ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟ ಚಿರು ಈಗ ದೈಹಿಕವಾಗಿಲ್ಲ. ಆದರೆ ಮಾನಸಿಕವಾಗಿ, ಮೇಘನಾ ಮನಸ್ಸಿನಲ್ಲಿ, ಕುಟುಂಬದವರ ನೆನಪಿನಲ್ಲಿ ಜೀವಂತವಾಗಿದ್ದಾರೆ. ನಟಿ ಮೇಘನಾ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಚಿರು ಜತೆಗಿನ ಫೋಟೋ ಶೇರ್ ಮಾಡಿದ್ದಾರೆ.ಮೇಘನಾ ರಾಜ್, ನಾನು ದೇವರನ್ನು ಕ್ಷಮಿಸುವ ಏಕೈಕ ಕಾರಣವೆಂದರೆ, ರಾಯನ್ ಮತ್ತು ನನಗೆ ಸರಿಯಾದ ಕೆಲಸವನ್ನ ಮಾಡುತ್ತಾನ ಎಂದು ತಿಳಿದುಕೊಳ್ಳಲು ದೇವರಿಗೆ ನಿಮ್ಮ ಮಾರ್ಗದರ್ಶನದ ಅಗತ್ಯವಿದೆ ಎಂದು ನನಗೆ ತಿಳಿದಿದೆ. ವಾರ್ಷಿಕೋತ್ಸವದ ಶುಭಾಶಯಗಳು ಬೇಬಿ ಮಾ ಎಂದು ಬರೆದು ಫೋಟೋ ಜತೆ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ದುನಿಯಾ ವಿಜಯ್ ಮತ್ತು ಬಾಲಯ್ಯ ನಟನೆಯ ಚಿತ್ರಕ್ಕೆ ಟೈಟಲ್ ಫಿಕ್ಸ್  A post shared by Meghana Raj Sarja (@megsraj)ಚಿರು ಇಲ್ಲದೆ ನೋವಿನಲ್ಲಿರೋ ಮೇಘನಾಗೆ ರಾಯನ್ ಖುಷಿಯೇ ಶಕ್ತಿ. ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ಮೇಘನಾ, ಈಗ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಜತೆಗೆ ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಗನ ಆರೈಕೆ ಮತ್ತು ಕೆಲಸ ಎರಡನ್ನು ನಿಭಾಯಿಸುತ್ತಿದ್ದಾರೆ.Sign in to your account
Username or Email Address


Password

 Remember Me


