ಬೆಂಗಳೂರು: ಏಪ್ರಿಲ್ 4 ರಂದು ಗ್ರ್ಯಾಮಿ ಪ್ರಶಸ್ತಿ ಗೆದ್ದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‍ರನ್ನು ಲಹರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯ್ತು. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಲಹರಿ ಸಂಸ್ಥೆ ಮುಖ್ಯಸ್ಥ ಮನೋಹರ್ ನಾಯ್ಡು, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್, ಸಿಇಓ ಅರುಣ್ ಸಿಂಗ್, ನಟರಾದ ಶಿವಣ್ಣ, ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮನೋಹರ್ ಅವರು ನಾವು ಒಟ್ಟಿಗೆ ಬೆಳೆದವರು. ಅಕ್ಕ ಪಕ್ಕದ ಮನೆಯವರು. ಮನೋಹರ್ ಹಾರ್ಡ್ ವರ್ಕ್ ಮಾಡ್ತಾರೆ. ಓನ್ಲಿ ಹಾರ್ಡ್ ವರ್ಕ್ ಮಾಡ್ತಾರೆ. ಬಟ್ ವೇಲು ಹಾರ್ಡ್ ವರ್ಕಿಂಗ್ & ಫನ್ ಲೀವಿಂಗ್ ಮನುಷ್ಯ ಎಂದರು. ಹೀಗೆ ಇಂಗ್ಲೀಷ್‍ನಲ್ಲಿ ಮಾತು ಶುರು ಮಾಡಿದ ಸಿಎಂಗೆ ಮುಂದೆ ಕುಳಿತಿರುವ ಒಬ್ಬರು ಕನ್ನಡ ಸರ್ ಅಂದ್ರು. ಕೂಡಲೇ ಉತ್ತರಿಸಿದ ಸಿಎಂ, ತಡಿಯಪ್ಪ ನಮ್ಮದು ಉತ್ತರ ಕರ್ನಾಟಕದ ಕನ್ನಡ. ನಿಮ್ಮದೆಲ್ಲಾ ಅರ್ಧಂಬಂರ್ಧ ಕನ್ನಡ ನಮ್ಮದು ಅಪ್ಪಟ ಕನ್ನಡ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನನನಗೆ ಗ್ರ್ಯಾಮಿ ಅವಾರ್ಡ್ ಅಂದ್ರೆ ಗೊತ್ತಿರಲಿಲ್ಲ. ನಾನು ಗ್ರ್ಯಾಮಿ ಅವಾರ್ಡ್ ಅಂದ್ರೆ ಜಿಂಗ್ ಚಾಂಗ್ ಇರುತ್ತೆ ಅನ್ಕೊಂಡು ಬಂದಿದ್ದೆ. ಇಲ್ಲಿ ಬಂದು ಆ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಖುಷಿ ಆಯ್ತು. ಸಾರ್ಥಕ ಅನ್ನಿಸ್ತು ಎಂದರು. ಇದನ್ನೂ ಓದಿ: ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ನಿಲ್ಲದ ರಾಕಿಭಾಯ್ ಆರ್ಭಟ: 400 ಕೋಟಿಯತ್ತ `ಕೆಜಿಎಫ್ 2′ಇದೇ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಮಾತನಾಡಿ, ರಿಕ್ಕಿ ಕೇಜ್‍ರನ್ನು 12-13 ವರ್ಷದ ಹಿಂದೆ ನಮ್ಮದೊಂದು ಸಣ್ಣ ಕೆಲಸಕ್ಕೆ ಸಂಪರ್ಕಿಸಿದ್ದೆ. ಅವರ ಪ್ಯಾಶನ್ ನೋಡಿ ಅನ್ನಿಸ್ತು. ಇವರು ನಮಗೆ ವರ್ಕೌಟ್ ಆಗಲ್ಲ ಎಂದು. ಹಾಗಿತ್ತು ಅವರ ಕೆಲಸ. ಕನ್ನಡಿಗರು ಎದ್ದು ನಿಂತ್ರೆ ಹೀಗೆ ಗ್ರ್ಯಾಮಿ ಅವಾರ್ಡ್ ಬರುತ್ತೆ. ಕೆಜಿಎಫ್ ನಂತಹ ಸಿನಿಮಾವೂ ಬರುತ್ತೆ ಎಂದು ಹಾಡಿ ಹೊಗಳಿದರು.ಈ ಮೊದಲು ವೇದಿಕೆಯಲ್ಲಿ ಮಾತು ಪ್ರಾರಂಭಿಸೋದಕ್ಕೂ ಮುನ್ನ ಸಿಎಂ ಜೊತೆ ರಂಗನಾಥ್ ಮಾತಿನ ಕೌಂಟರ್ ನೀಡಿದರು. ರಂಗನಾಥ್ ವೇದಿಕೆ ಏರುತ್ತಿದ್ದಂತೆ ತಾವು ಕುಳಿತಲ್ಲಿಯೇ ಪ್ರೈಮ್ ಟೈಂ ಆಯ್ತು ಎಂದು ಸಿಎಂ ಕಾಲೆಳೆದರು. ಈ ವೇಳೆ ರಂಗನಾಥ್, ನಾನು ಇಲ್ಲಿರೋದು ಬಿಟ್ಟು ಅಲ್ಲಿದ್ರೆ ನಿಮಗೇ ಡೇಂಜರ್ ಎಂದು ನಗುತ್ತಾ ಉತ್ತರಿಸಿದ್ರು.ಈ ಮೊದಲು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‍ರನ್ನು ಸನ್ಮಾನಿಸಿದ್ರು. ಗ್ರ್ಯಾಮಿ ಪ್ರಶಸ್ತಿ ಪಡೆದ ಡಿವೈನ್ ಟೈಡ್ಸ್ ಆಲ್ಬಂ ಅನ್ನು ಲಹರಿ ಸಂಸ್ಥೆಯೇ ನಿರ್ಮಿಸಿತ್ತು.






 Advertisement 




Sign in to your account
Username or Email Address


Password

 Remember Me


