ಈಗಾಗಲೇ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಎದುರಿಸುತ್ತಿರುವ ಮಲಯಾಳಂ ಖ್ಯಾತ ನಟ ಕಂ ನಿರ್ಮಾಪಕ ವಿಜಯ್ ಬಾಬು ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಕೆಲಸದ ವೇಳೆ ವಿಜಯ್ ನನಗೆ ಬಲವಂತವಾಗಿ ಕಿಸ್ ಮಾಡಲು ಮುಂದಾದ ಎಂದು ಮಹಿಳೆಯೊಬ್ಬರು ಬಹಿರಂಗವಾಗಿ ಮಾತನಾಡಿದ್ದಾರೆ. ಹೀಗಾಗಿ ವಿಜಯ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿವಿಜಯ್ ಬಾಬು ಯಾವಾಗಲೂ ವಿಪರೀತ ಕುಡಿಯುತ್ತಾರೆ. ಅಂದು ನನಗೂ ಅವರು ಕುಡಿಯುವಂತೆ ಆಫರ್ ಮಾಡಿದರು. ನಾನು ಒಪ್ಪಲಿಲ್ಲ. ಅವರು ಮಾತ್ರ ಕಂಟ್ರೋಲ್ ಗೆ ಸಿಗದಷ್ಟು ಕುಡಿದಿದ್ದರು. ಏಕಾಏಕಿ ಮುತ್ತಿಕ್ಕಲು ಬಂದರು. ನಾನು ಅವರನ್ನು ದೂರ ತಳ್ಳಿದೆ. ಕೇವಲ ಒಂದೇ ಒಂದು ಕಿಸ್ ಎಂದು ಬೇಡಿಕೆ ಇಟ್ಟರು. ನಾನು ನಿರಾಕರಿಸಿ ಅಲ್ಲಿಂದ ತಪ್ಪಿಸಿಕೊಂಡು ಬಂದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿಈಗಾಗಲೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ವಿಜಯ್ ಬಾಬು, ಈವರೆಗೂ ಪೊಲೀಸರಿಗೆ ಸಿಕ್ಕಿಲ್ಲ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈವರೆಗೂ ಅವರನ್ನು ಬಂಧಿಸದೇ ಇರುವುದಕ್ಕೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿದೆ. ಎರ್ನಾಕುಲಂ ಪೊಲೀಸ್ ವಿರುದ್ಧ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸುತ್ತಿದ್ದಾರೆ.  ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದ ವಿಜಯ್ ಬಾಬು, ಕೊಚ್ಚಿಯ ಎರ್ನಾಕುಲಂ ಫ್ಲ್ಯಾಟ್ ನಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.Sign in to your account
Username or Email Address


Password

 Remember Me


