ಕನ್ನಡದ ಹೆಮ್ಮೆ `ಕೆಜಿಎಫ್ 2′ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಯಶ್ ಖಡಕ್ ಆಕ್ಟಿಂಗ್ ನೋಡಿ ಅಭಿಮಾನಿ ದೇವರುಗಳು ಅಪ್ಪಿ ಒಪ್ಪಿಕೊಂಡಿದಾಯ್ತು. ಈಗ ರಾಕಿಭಾಯ್ ಮಗಳು ಐರಾ ಸಲಾಮ್ ರಾಕಿಭಾಯ್ ಅಂತಾ ಹೇಳಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಶನ್‌ನ ಯಶಸ್ವಿ ಚಿತ್ರ `ಕೆಜಿಎಫ್ 2′ ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಬಾಲಿವುಡ್‌ನಲ್ಲಿ ಯಶ್‌ದೇ ಕಾರುಬಾರು ಹೀಗೆಲ್ಲಾ ಇರುವಾಗ ಇದೀಗ ಮಾಸ್ಟರ್‌ಪೀಸ್ ಯಶ್ ಮಗಳು ಐರಾ ಸಲಾಂ ರಾಕಿಭಾಯ್ ರಾ.. ರಾ..ರಾಕಿ ಅಂತಾ ಮುದ್ದು ಮುದ್ದಾಗಿ ಹೇಳಿದ್ದಾರೆ.  A post shared by Yash (@thenameisyash)ನ್ಯಾಷನಲ್ ಯಶ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೆಳಗಿನ ಆಚರಣೆ ರಾಕಿಭಾಯ್ ಜತೆ ತಮಾಷೆಯೊಂದಿಗೆ ಶುರುವಾಗಬೇಕು ಎಂದು ಪುತ್ರಿ ಐರಾ ಸಲಾಂ ರಾಕಿಭಾಯ್ ರಾ.. ರಾ..ರಾಕಿ ಅಂತಾ ವಿಡಿಯೋ ಯಶ್ ಸೋಷಿಯಲ್ ಮೀಡಿಯಾ ಖಾತೆ ಸಖತ್ ವಿವ್ಸ್ ಗಿಟ್ಟಿಸಿಕೊಳ್ಳುವುದರ ಜತೆಗೆ ಸಲಾಂ ರಾಕಿಭಾಯ್ ಎಂದ ಐರಾ ಕ್ಯೂಟ್‌ನೆಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.‌ ಇದನ್ನೂ ಓದಿ: `ಪುಷ್ಪ’ ಬೆಡಗಿ ರಶ್ಮಿಕಾ ಒಂದೇ ದಿನ ಏನೆಲ್ಲಾ ತಿಂತಾರೆ ಗೊತ್ತಾ? ರಶ್ಮು ವಿಡಿಯೋ ವೈರಲ್ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಯಶಸ್ಸಿನಿಂದ ಮಿರ ಮಿರ ಅಂತಾ ಮಿಂಚ್ತಿರೋ ಯಶ್ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜತೆಗೆ `ಕೆಜಿಎಫ್ 2′ ಅಪ್‌ಡೇಟ್ ಕುರಿತು ಕ್ಯೂರಿಯಸ್ ಆಗಿದ್ದಾರೆ.Sign in to your account
Username or Email Address


Password

 Remember Me


