ರಾಯಚೂರು: ನಗರದ ಕನ್ನಡ ಭವನ ಕಾಂಪೌಂಡ್ ಹಾಗೂ ಸುತ್ತಲ ಪ್ರದೇಶ ಲವ್ವರ್ಸ್‌ ಳಿಗೆ ಹಾಟ್ ಸ್ಪಾಟ್‌ ಆಗಿ ಮಾರ್ಪಟ್ಟಿದೆ. ಸಾರ್ವಜನಿಕ ಸ್ಥಳದಲ್ಲಿ ಯಾವ ಮುಜುಗರವಿಲ್ಲದೆ ಕಾಲೇಜು ವಿದ್ಯಾರ್ಥಿಗಳು ಲವ್ವಿಡವ್ವಿ ಶುರುಮಾಡಿದ್ದಾರೆ.ಜನರು ಓಡಾಡುವ ಸ್ಥಳದಲ್ಲೇ ಯುವ ಪ್ರೇಮಿಗಳು ಕಿಸ್ಸಿಂಗ್, ಹಗ್ಗಿಂಗ್, ರೊಮ್ಯಾನ್ಸ್ ನಡೆಸಿದ್ದಾರೆ. ಪ್ರೇಮಿಗಳ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಬೇಸತ್ತು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಯುವಕ-ಯುವತಿಯರು ಸ್ಥಳದಿಂದ ಓಡಿ ಹೋಗುತ್ತಾರೆ. ನಿತ್ಯ ಹೊಸ ಹೊಸ ಜೋಡಿಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ.ಲರ್ವಸ್ ಗಳ ಈ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಜಾಗದಲ್ಲಿ ಇದೇ ಗೋಳು ಅಂತ ಸ್ಥಳೀಯರು ಬೇಸರ ಹೊರಹಾಕಿದ್ದಾರೆ. ಪಕ್ಕದಲ್ಲಿ ದೇವಾಲಯಗಳು, ಕಲ್ಯಾಣ ಮಂಟಪ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಇದ್ದರೂ ಯುವಕ-ಯುವತಿಯರು ಯಾವುದಕ್ಕೂ ಕೇರ್ ಮಾಡುತ್ತಿಲ್ಲ. ಹೀಗಾಗಿ ಇದಕ್ಕೆ ಕಡಿವಾಣ ಹಾಕಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿದ ಪ್ರಕರಣ – ಐವರ ಮೃತದೇಹ ಪತ್ತೆ, ಕಾರ್ಯಾಚರಣೆ ಮುಕ್ತಾಯSign in to your account
Username or Email Address


Password

 Remember Me


