ಹುಬ್ಬಳ್ಳಿ: ಸಿಎಂ, ಡಿಸಿಎಂ (CM, DCM) ಆಯ್ಕೆ ಮಾಡಿವ ಅಧಿಕಾರ ಇರೋದು ಶಾಸಕರಿಗೆ. ನಮ್ಮಂತಹ ಧರ್ಮಗುರುಗಳು ಈ ವಿಚಾರದಲ್ಲಿ ಮೂಗು ತೂರಿಸೋದು ಸರಿಯಲ್ಲ ಅಂತ ಪಂಚಮಸಾಲಿ ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿಂದು (Hubballi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣಿಗಳು ಸಲಹೆ ಕೇಳಿದಾಗ ಧರ್ಮಗುರುಗಳು ಸಲಹೆ ಕೊಡಬೇಕು. ಆದ್ರೆ ಇಂತಹವರನ್ನೇ ಸಿಎಂ, ಡಿಸಿಎಂ ಮಾಡಿ ಅಂತ ಹೇಳೋದು‌ ಸರಿ ಅಲ್ಲ. ಯಾರನ್ನಾದರೂ ಸಿಎಂ ಮಾಡಿ, ಡಿಸಿಎಂ ‌ಮಾಡಲಿ. ನಮಗೆ 2A ಮೀಸಲಾತಿ (2A Reservation) ಕೊಡಲಿ‌ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿನಮ್ಮ ಹೋರಾಟ ದುರುಪಯೋಗ ಆಗಿದೆ:
ವಿನಯ ಕುಲಕರ್ಣಿ, ಹೆಬ್ಬಾಳಕರ್ ಅವರು ಸಿಎಂಗೆ ಬಹಳ ಸಲ ಹೇಳಿದ್ದಾರೆ. ಆದರೂ ಸಿದ್ದರಾಮಯ್ಯ ಸಭೆ ಕರೆದಿಲ್ಲ. ಕಲಬುರಗಿಯಲ್ಲಿ ಸಮಾವೇಶ ಮಾಡಿದ್ದೆವು, ಅದೂ ಉಪಯೋಗಕ್ಕೆ ಬರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಯತ್ನಾಳ್‌ ಧ್ವನಿ ಎತ್ತಿದ್ದರು, ನಂತರ ಯಡಿಯೂರಪ್ಪ ಅವರು ಸಭೆ ‌ಕರೆದಿದ್ದರು. ಬೊಮ್ಮಾಯಿ ಸಹ ಸಿಎಂ ಆಗಿದ್ದಾಗ ಸಭೆ ಕರೆದಿದ್ದರು. ಆದ್ರೆ ಸಿದ್ದರಾಮಯ್ಯ ಅವರು ಇನ್ನೂ ಮೀಟಿಂಗ್ ಕರೆದಿಲ್ಲ. ನಮ್ಮ ಸಮುದಾಯದ ಶಾಸಕರ ಭಾವನೆಗಳನ್ನು ಸರ್ಕಾರ ಅರ್ಥ ಮಾಡಕೊಬೇಕು. ಸಮಾಜವನ್ನು 100 ವರ್ಷದಿಂದ ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ. ನಮ್ಮ‌ ಹೋರಾಟವನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಮುಂದೆ ತಡೆದಿದ್ದಕ್ಕೆ ಕಾಲೇಜ್ ಸೆಕ್ಯೂರಿಟಿ ಹತ್ಯೆ – ಪೊಲೀಸರ ಮುಂದೆ ಬಾಯ್ಬಿಟ್ಟ ವಿದ್ಯಾರ್ಥಿSign in to your account
Username or Email Address


Password

 Remember Me


