ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಉಡುಪಿ ಪೊಲೀಸರು ನಗರದ ಹಿಂಡಲಗಾ ಗ್ರಾಂ.ಪಂ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ವಿಚಾರಣೆಗಾಗಿ ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ ನೇತೃತ್ವದ ತಂಡ ಮತ್ತೆ ತನಿಖೆ ಚುರುಕುಗೊಳಿಸಿದೆ. ಸಂತೋಷ್ ಪಾಟೀಲ್ ಮನೆಯನ್ನು ನಾಗೇಶ್ ಮನ್ನೋಳಕರ್, ಗ್ರಾ.ಪಂ.ಸದಸ್ಯ ಎನ್.ಎಸ್.ಪಾಟೀಲ್ ಸೇರಿ ಜಿಪಿಎ ಮಾಡಿಸಿಕೊಂಡಿದ್ದರು. ಇದನ್ನೂ ಓದಿ: ಭಾರತಕ್ಕೆ ಆಧ್ಯಾತ್ಮಿಕ ಪ್ರಯಾಣ – ಪ್ರಧಾನಿ ಮೋದಿ ಹೊಗಳಿದ ಡ್ವಿಟ್ ಹೊವಾರ್ಡ್ಜಿಪಿಎ ಮಾಡಿಸಿಕೊಂಡಿದ್ದೇಕೆ? ಜಿಪಿಎ ಮಾಡಿಸಿಕೊಂಡು ಎಷ್ಟು ಹಣ ಕೊಟ್ಟಿದ್ದರು? 108 ಕಾಮಗಾರಿ ಆರಂಭಿಸಲು ಹೇಳಿದ್ದು ಯಾರು? ಎಂಬ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಉಡುಪಿ ಪೊಲೀಸರು ನಾಗೇಶ್ ಮನ್ನೋಳಕರ್ ಮೊಬೈಲ್‍ನ್ನು ಅನಾಲಿಸಿಸ್‍ಗೆ ಕಳಿಸಿದ್ದಾರೆ. ಹಿಂಡಲಗಾ ಗ್ರಾ.ಪಂ 35 ಸದಸ್ಯರಿಗೂ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬ ಸದಸ್ಯರನ್ನು ಪ್ರತ್ಯೇಕವಾಗಿ ಒನ್ ಟು ಒನ್ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.  ಇದನ್ನೂ ಓದಿ: ಬಡ ಮುಸ್ಲಿಮರ ಮೇಲೆ ಬಿಜೆಪಿ ಸಮರ ಸಾರಿದೆ: ಓವೈಸಿ ಕಿಡಿನಿಮ್ಮ ವಾರ್ಡ್‍ನಲ್ಲಿ ಸಂತೋಷ್ ಪಾಟೀಲ್ ಕಾಮಗಾರಿ ಮಾಡಿದ್ದಾರಾ? ಕಾಮಗಾರಿ ಮಾಡಿದ್ರೆ ಎಷ್ಟು ವೆಚ್ಚದಲ್ಲಿ ಕಾಮಗಾರಿ ಮಾಡಿದ್ದಾರೆ? ಯಾವ ಅನುದಾನದಲ್ಲಿ ಕಾಮಗಾರಿ ಮಾಡುತ್ತಿರುವುದಾಗಿ ಹೇಳಿದ್ದರು. ಸಂತೋಷ ಪಾಟೀಲ್‍ರವರೇ ಕಾಮಗಾರಿ ಮಾಡಿದ್ದಾರೋ? ಉಪಗುತ್ತಿಗೆದಾರರು ಮಾಡಿದ್ದಾರೋ? ಹೀಗೆ ಎಲ್ಲ ಮಾಹಿತಿ ಪಡೆದು ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳಲು ನಿರ್ಧರಿಸಿದ್ದಾರೆ.ಗ್ರಾ.ಪಂ. ಮಹಿಳಾ ಸದಸ್ಯರ ವಿಚಾರಣೆಗೆ ಮಹಿಳಾ ಪೇದೆಗಳ ನಿಯೋಜನೆ ಮಾಡಲಾಗಿದೆ. ಸಂತೋಷ್ ಪಾಟೀಲ್‍ನಿಂದ ಉಪ ಗುತ್ತಿಗೆ ಪಡೆದ 12 ಉಪಗುತ್ತಿಗೆದಾರರಿಂದಲೂ ಮಾಹಿತಿ ಸಂಗ್ರಹಿಸಲಿದ್ದಾರೆ. ಉಪಗುತ್ತಿಗೆ ಪಡೆದು ಕಾಮಗಾರಿ ಮಾಡಿದ ವೆಚ್ಚ, ಕಾಮಗಾರಿಗೆ ಸಾಮಗ್ರಿ ಖರೀದಿಸಿದ್ದ ರಶೀದಿ ಸೇರಿ ಎಲ್ಲ ದಾಖಲೆ ನೀಡುವಂತೆಯೂ ಸೂಚನೆ ನೀಡಲಾಗಿದೆ.Sign in to your account
Username or Email Address


Password

 Remember Me


