ನಿನ್ನೆಯಷ್ಟೇ ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಹೊಸ ಫೋಟೋವೊಂದನ್ನು ಹಾಕಿ ‘ನಾನೂ ನಾಚುತ್ತೇನೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಹೃದಯ ಎಮೋಜಿಗಳನ್ನು ನೆಚ್ಚಿನ ನಟಿಗೆ ಕಳುಹಿಸಿದ್ದಾರೆ. ತೆರೆಯ ಮೇಲೆ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದೂ ಅಭಿಮಾನಿಗಳು ಬರೆದಿದ್ದಾರೆ. ಇದನ್ನೂ ಓದಿ : ಹಿಂದಿ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ: ಕಂಗನಾ ರಣಾವತ್ಯಶ್ ಅವರನ್ನು ಮದುವೆಯಾದ ನಂತರ ಸಿನಿಮಾ ರಂಗದಿಂದಲೇ ರಾಧಿಕಾ ದೂರವಾದರು. ಆರು ವರ್ಷಗಳಿಂದ ಅವರು ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಆದಿ ಲಕ್ಷ್ಮಿ ಪುರಾಣ ಸಿನಿಮಾದ ನಂತರ ಮತ್ತೆ ಅವರು ತೆರೆಯ ಮೇಲೂ ಬಂದಿಲ್ಲ. ಹಾಗಾಗಿ ರಾಧಿಕಾ ಆದಷ್ಟು ಬೇಗ ಸಿನಿಮಾ ಒಪ್ಪಿಕೊಳ್ಳಬೇಕು ಎನ್ನುವುದು ಅಭಿಮಾನಿಗಳ ಬೇಡಿಕೆ.  A post shared by Radhika Pandit (@iamradhikapandit)ಕೆಲ ತಿಂಗಳಿಂದ ರಾಧಿಕಾ ಮತ್ತೆ ಸಿನಿಮಾ ರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮೂರ್ನಾಲ್ಕು ವರ್ಷಗಳಿಂದ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಅವರು, ಇದೀಗ ಮಕ್ಕಳು ದೊಡ್ಡವರಾಗಿದ್ದರಿಂದ ಅವರನ್ನು ಮನೆಯಲ್ಲೇ ಬಿಟ್ಟು ಶೂಟಿಂಗ್‌ಗೆ ಬರಲು ಯಾವುದೇ ತೊಂದರೆ ಆಗದು. ಹಾಗಾಗಿ ಆದಷ್ಟು ಬೇಗ ಸಿನಿಮಾಗಳನ್ನು ಒಪ್ಪಿಕೊಳ್ಳಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ : ಕಂಗನಾ ರಣಾವತ್ ಏನಿದು ಅವತಾರ ಎಂದ ನೆಟ್ಟಿಗರುಯಶ್ ಮತ್ತು ರಾಧಿಕಾ ಮತ್ತೆ ಒಟ್ಟಾಗಿ ನಟಿಸಬೇಕು ಎನ್ನುವುದು ಇವರಿಬ್ಬರ ಅಭಿಮಾನಿಗಳ ಆಗ್ರಹ. ಒಟ್ಟಿಗೆ ನಟಿಸಿದ ಬಹುತೇಕ ಚಿತ್ರಗಳು ಹಿಟ್ ಆಗಿರುವುದರಿಂದ ಮತ್ತೆ ಯಾಕೆ ತೆರೆಯ ಮೇಲೆ ಕಾಣಿಸಿಕೊಳ್ಳಬಾರದು ಎನ್ನುವುದು ಅಭಿಮಾನಿಗಳ ಪ್ರಶ್ನೆ. ಈ ರೀತಿಯ ಅನೇಕ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದರೂ, ಅದಕ್ಕೆ ರಾಧಿಕಾ ಯಾವುದೇ ಉತ್ತರ ನೀಡಿಲ್ಲ.Sign in to your account
Username or Email Address


Password

 Remember Me


