ಬೆಂಗಳೂರು: ಶ್ವಾನವನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಯುವಕನೊಬ್ಬ ತಲ್ವಾರ್ ಹಿಡಿದುಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.ಬೆಂಗಳೂರಿನ ಚಂದಾಪುರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಬೀದಿನಾಯಿಗಳು ಅಟ್ಯಾಕ್ ಮಾಡುವ ಭಯದಿಂದ ಯುವಕ ತಲ್ವಾರ್ ಹಿಡಿದುಕೊಂಡು ಹೋಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.ಯುವಕ ಬೀದಿನಾಯಿಗಳ ಮೇಲೆ ತಲ್ವಾರ್ ನಿಂದ ಹಾನಿ ಮಾಡಿಲ್ಲ. ಆದರೂ ನಾಯಿಗಳನ್ನು ಹೊಡೆಯೋಕೆ ಈ ರೀತಿ ತಲ್ವಾರ್ ಹಿಡಿದುಕೊಂಡು ಹೋಗೋದು ಸರಿಯಲ್ಲ ಅಂತಾ ಪ್ರಾಣಿಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್Sign in to your account
Username or Email Address


Password

 Remember Me


