ಬೆಂಗಳೂರು: ಮೇ 3 ಬಿಜೆಪಿಗೆ ಬಿಗ್ ಡೇ ಆಗಲಿದೆ. ಸಂಪುಟ ಪುನಾರಚನೆಯ ಮಾತುಕತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯಲ್ಲೇ ನಡೆಯಲಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬಸವರಾಜ ಬೊಮ್ಮಾಯಿ ಅವರು ಊಟದ ವ್ಯವಸ್ಥೆ ಏರ್ಪಾಡು ಮಾಡಿದ್ದಾರೆ. ಮಧ್ಯಾಹ್ನ 2 ರಿಂದ 3ಗಂಟೆ ತನಕ ಸಿಎಂ ಸರ್ಕಾರಿ ನಿವಾಸದಲ್ಲಿ ಅಮಿತ್ ಶಾ ಲಂಚ್ ಟಾಕ್ ನಡೆಯಲಿದೆ.ಆ ಒಂದು ಗಂಟೆಯಲ್ಲಿ ರಾಜ್ಯ ಸಂಪುಟ ಪುನಾರಚನೆಯ ಅಸಲಿ ಆಟ ನಡೆಯಲಿದೆ. ಅದಾದ ಬಳಿಕ 4 ಗಂಟೆಗೆ ಬಿಜೆಪಿ ಕಚೇರಿಗೂ ತೆರಳಿ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಒಂದು ಗಂಟೆಗಳ ಕಾಲ ಬಿಜೆಪಿ ಕಚೇರಿಯಲ್ಲಿ ಅಮಿತ್ ಶಾ ಇರಲಿದ್ದು, ಈ ವೇಳೆ ಸಂಘಟನೆ, ಸರ್ಕಾರದ ರಿವ್ಯೂವ್ ಮಾಡಲಿದ್ದಾರೆ. ಇದನ್ನೂ ಓದಿ: ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡುತ್ತಿದ್ದರೆ ಬಂದ್ ಮಾಡಿಸಿ – ಅಧಿಕಾರಿಗಳಿಗೆ ಕಾರಜೋಳ ವಾರ್ನಿಂಗ್ಏಪ್ರಿಲ್ 1 ರಂದು ಕೂಡ ಅಮಿತ್ ಶಾ ಅವರು ಕಚೇರಿಗೆ ಭೇಟಿ ನೀಡಿ ಕೋರ್ ಕಮಿಟಿ ಸಭೆ ನಡೆಸಿದ್ದರು. ಕಳೆದ ಬಾರಿ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀಗಳ ಜಯಂತ್ಯೋತ್ಸವದಲ್ಲಿ ಭಾಗಿಯಾಗಿದ್ರು. ಈ ಬಾರಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲುಕ್ಯ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ.ಒಟ್ಟಿನಲ್ಲಿ ತಿಂಗಳಾಗುತ್ತಿದ್ದಂತೆ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿರವುದು ಪಕ್ಷದ ವಲಯದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ತಮ್ಮದೇ ಪಕ್ಷದ ಮುಖಂಡರ ಫ್ಲೆಕ್ಸ್ ವಿರುದ್ಧ ಪ್ರತಾಪ್ ಸಿಂಹ ಗರಂSign in to your account
Username or Email Address


Password

 Remember Me


