ಬಾಲಿವುಡ್ ನಟಿ ಕತ್ರಿನಾ ಕೈಫ್ ಮದುವೆಯಾದ ನಂತರ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಫರ್ಹಾನ್ ಅಖ್ತರ್ ನಿರ್ದೇಶನದ ‘ಜೀ ಲೇ ಝರಾ’ ಸಿನಿಮಾದಲ್ಲಿ ಸದ್ಯ ಅವರು ನಟಿಸುತ್ತಿದ್ದರೂ, ಸಿನಿಮಾ ರಂಗದಲ್ಲಿ ಅವರು ಅಷ್ಟೊಂದು ಆಕ್ಟಿವ್ ಆಗಿಲ್ಲ ಎನ್ನುವುದು ಕತ್ರಿನಾರ ಅಭಿಮಾನಿಗಳ ನೋವಾಗಿತ್ತು. ಇದೀಗ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೋಡಿದ್ದಾರೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್ಸದ್ಯ ಕತ್ರಿಕಾ ಅವರು ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3; ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಲ್ಲದೇ, ಪತಿಯ ಜತೆ ಇನ್ನೂ ಹೆಸರಿಡದ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸಾರಾ ಅಲಿ ಖಾನ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ.  ಇದನ್ನೂ ಓದಿ : ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ  A post shared by Katrina Kaif (@katrinakaif)2021 ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯಿ ಮಧೋಪುರದಲ್ಲಿ ವಿಕ್ಕಿ ಕೌಶಲ್ ಜತೆ ಕತ್ರಿನಾ ಕೈಫ್ ಸಪ್ತಪದಿ ತುಳಿದ ನಂತರ ಸಿನಿಮಾ ರಂಗದಲ್ಲಿ ಅವರು ಅಷ್ಟೊಂದು ಸಕ್ರಿಯರಾಗುವುದು ಅನುಮಾನ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಕೆಲ ತಿಂಗಳು ಅವರು ಯಾವುದೇ ಸಿನಿಮಾದಲ್ಲಿ ನಟಿಸದೇ ಇರುವ ಕಾರಣಕ್ಕಾಗಿ ಅದು ನಿಜ ಎಂದು ನಂಬಲಾಗಿತ್ತು. ಇದೀಗ ಕತ್ರಿನಾ ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾರೆ.ಈ ಮಧ್ಯ ಕತ್ರಿನಾ ಹಾಲಿಡೇ ಮೂಡ್ ನಲ್ಲಿದ್ದು, ಸಮುದ್ರದ ದಂಡೆಯ ಮೇಲೆ ನಿಂತುಕೊಂಡು ಸೂರ್ಯನಿಗಾಗಿ ಕಾಯುವಂತೆ ಒಂದು ಫೋಟೋ ತಗೆಸಿಕೊಂಡಿದ್ದು, ನೀಲಿ ಬಣ್ಣದ ಬಿಕಿನಿಯಲ್ಲಿ ಮಿರಮಿರ ಮಿಂಚುತ್ತಿದ್ದಾರೆ.Sign in to your account
Username or Email Address


Password

 Remember Me


