ಸಿನಿಮಾ ಅಂದ್ರೆ `ಕೆಜಿಎಫ್ 2′ ಅನ್ನೋವಷ್ಟರ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿರೋ ಸಿನಿಮಾ. ರಾಷ್ಟ್ರ ಭಾಷೆ ವಿವಾದದ ನಡುವೆಯೂ ಯಶಸ್ವಿ ಪ್ರದರ್ಶನ ಕಾಣ್ತಿದೆ ಯಶ್ ಸಿನಿಮಾ. ದಿನದಿಂದ ದಿನಕ್ಕೆ ಕೋಟಿ ಕೋಟಿ ಲೂಟಿ ಮಾಡ್ತಿರೋ `ಕೆಜಿಎಫ್ 2′ ಚಿತ್ರದ ಈಗಿನ ಕಲೆಕ್ಷನ್ ಅಪ್‌ಡೇಟ್ 343.13 ಕೋಟಿ ಬಾಚಿದೆ. ಬಾಲಿವುಡ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿ ಮೂರನೇ ಸ್ಥಾನದಲ್ಲಿದೆ.ಪ್ರಶಾಂತ್‌ನೀಲ್ ಮತ್ತು ಯಶ್ ಕಾಂಬಿನೇಷನ್‌ನ `ಕೆಜಿಎಫ್ 2′ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಿತ್ತು. ಬಿಡುಗಡೆಯಾಗಿ 15 ದಿನಗಳಾದ್ರು ಕಲೆಕ್ಷನ್ ಎಲ್ಲೂ ಹಿಂದೆ ಬೀಳದೇ ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರಗಳಲ್ಲಿ `ಕೆಜಿಎಫ್ 2′ ಮೂರನೇ ಸ್ಥಾನದಲ್ಲಿದೆ. `ಟೈಗರ್ ಜಿಂದಾ ಹೈ’, ಪಿಕೆ, ಸಂಜು ಸಿನಿಮಾಗಳನ್ನು ಸೆಡ್ಡು ಹೊಡೆದು 343.13 ಕೋಟಿ ಬಾಚಿದೆ.#KGF2 crosses #TigerZindaHai, #PK and #Sanju *lifetime biz*… NOW, 3RD HIGHEST GROSSING *HINDI* FILM… [Week 2] Fri 11.56 cr, Sat 18.25 cr, Sun 22.68 cr, Mon 8.28 cr, Tue 7.48 cr, Wed 6.25 cr. Total: ₹ 343.13 cr. #India biz. #Hindi pic.twitter.com/zcmXDedEuQ— taran adarsh (@taran_adarsh) April 28, 2022ಸಲ್ಮಾನ್ ನಟನೆಯ `ಟೈಗರ್ ಜಿಂದಾ ಹೈ’ 339.16, ಅಮೀರ್ ಖಾನ್ ನಟನೆಯ ಪಿಕೆ 340.8, ರಣ್‌ಬೀರ್ ಕಪೂರ್ ನಟನೆಯ ಸಂಜು 342.53 ಕಲೆಕ್ಷನ್‌ ಮಾಡಿದೆ. ʻಬಾಹುಬಲಿ 2′ ಮೊದಲ ಸ್ಥಾನದಲ್ಲಿದ್ದರೆ, ದಂಗಲ್ ಎರಡನೇ ಸ್ಥಾನದಲ್ಲಿದೆ, `ಕೆಜಿಎಫ್ 2′ ಮೂರನೇ ಸ್ಥಾನದಲ್ಲಿದೆ. ಇನ್ನು ಬಾಲಿವುಡ್ ಸದ್ಯ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿರುವುದು ಯಾವುದು ಇಲ್ಲ. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ದನಿಗೂಡಿಸಿದ ಸಿಎಂ ಬೊಮ್ಮಾಯಿಹಿಂದಿ ರಾಷ್ಟ್ರಭಾಷೆ ಎಂಬ ವಿವಾದದ ನಡುವೆಯೂ 342 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಒಟ್ನಲ್ಲಿ ದಿನದಿಂದ ದಿನಕ್ಕೆ ಸಿನಿಮಾ ಸಂಖ್ಯೆ ಜಾಸ್ತಿಯಾಗುತ್ತಿದೆ. ವಿನಃ ಕಮ್ಮಿಯಾಗುತ್ತಿಲ್ಲ.Sign in to your account
Username or Email Address


Password

 Remember Me


