ರಾಯಚೂರು: ಮಾನಸಿಕ ಅಸ್ವಸ್ಥನೋರ್ವ ಗುದ್ದಲಿಯಿಂದ ಹೊಡೆದು ವ್ಯಕ್ತಿಯೊಬ್ಬನನ್ನ ಕೊಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಗ್ರಾಮದಲ್ಲಿ ನಡೆದಿದೆ.ಮೂಲಪ್ಪ ಸೋಮನಮರಡಿ (46) ಕೊಲೆಯಾದ ವ್ಯಕ್ತಿ. ಆರೋಪಿ ಮೌನೇಶ್ ಗುದ್ದಲಿ ಹಿಡಿದು ಜನರನ್ನು ಹೆದರಿಸಿಕೊಂಡು ಗ್ರಾಮದಲ್ಲಿ ಓಡಾಡುತ್ತಿದ್ದ. ಗುದ್ದಲಿ ಹಿಡಿದುಕೊಂಡು ಓಡಾಡುವ ವಿಚಾರಕ್ಕೆ ಮಾತಿನ ಚಕಮಕಿ ಬೆಳೆದು ಜಗಳವಾಗಿ ಕೊಲೆ ನಡೆದಿದೆ. ಗುದ್ದಲಿಯಿಂದ ಬಲವಾಗಿ ತಲೆಗೆ ಹೊಡೆದ ಪರಿಣಾಮ ರಕ್ತಸ್ರಾವವಾಗಿ ಮೂಲಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂಭಾಗದಲ್ಲೇ ಏರ್‌ ಫೈರ್ – ವೆಬ್ ಡಿಸೈನರ್ ಕಿಡ್ನಾಪ್ಆರೋಪಿ ಮೌನೇಶ್ ಈ ಹಿಂದೆ ಗ್ರಾಮದ ನಾಲ್ಕು ಬಣವೆಗಳಿಗೆ ಬೆಂಕಿ ಹಚ್ಚಿ ಅವಾಂತರ ಸೃಷ್ಟಿಸಿದ್ದನು. ಗ್ರಾಮದಲ್ಲಿ ಗುದ್ದಲಿ ಹಿಡಿದುಕೊಂಡು ಓಡಾಡಿ ಜನರಿಗೆ ಭಯಹುಟ್ಟಿಸಿದ್ದ ಅಂತ ಗ್ರಾಮಸ್ಥರು ತಿಳಿಸಿದ್ದಾರೆ.ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರನ ಸೂಪರ್‌ವೈಸರ್ ನೇಣುಬಿಗಿದು ಆತ್ಮಹತ್ಯೆಗೆ ಶರಣುSign in to your account
Username or Email Address


Password

 Remember Me


