ತುಮಕೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನವರು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ತುಮಕೂರಿಗೆ ಕರೆದೊಯ್ದು ಸೋಲಿಸಿ ವಿಷ ಕೊಟ್ಟರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.ತುಮಕೂರಿನಲ್ಲಿ ಜನತಾಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ಮಾಡಿದಾಗ ಸಿಎಂ ಕುಮಾರಸ್ವಾಮಿಗೆ ಬಿಜೆಪಿಗಿಂತ ಕಾಂಗ್ರೆಸ್‍ನವರೇ ಹೆಚ್ಚು ಕಾಟ ಕೊಟ್ಟರು. ಹಾಗಾಗಿ ಅಧಿಕಾರದಿಂದ ಕೆಳಗೆ ಇಳಿಯುವಂತಾಯಿತು. ಮುಕ್ಕಣ್ಣಿಗೆ ಮೂರನೇ ಕಣ್ಣಿರುವಂತೆ ಮುಂದಿನ ಬಾರಿ ಜನತಾದಳ ಶಿವನ ಮೂರನೇ ಕಣ್ಣಿನಂತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ರಾಜಕಾರಣಿಗಳಿಗೆ ದಿವ್ಯಾ ಜಾಲ – ಘಟಾನುಘಟಿಗಳೊಂದಿಗಿನ ಫೋಟೋಸ್ ವೈರಲ್ಪರಮೇಶ್ವರ್‌ಗೆ ಕೇಳ್ತೀನಿ ಕುಮಾರಸ್ವಾಮಿಯನ್ನು ತೆಗೆದು ಯಡಿಯೂರಪ್ಪನ ತಂದವರು ಯಾರೆಂದು ನಿಜ ಹೇಳಿ. ಸಿದ್ದಗಂಗಾ ಮಠದಲ್ಲಿ ಪ್ರಮಾಣ ಮಾಡಬೇಕು. ನೀವು ಬಿಜೆಪಿ ಸರ್ಕಾರ ತಂದು ಜೆಡಿಎಸ್‍ನ್ನು ಬಿಜೆಪಿ ʼಬಿʼ ಟೀಂ ಎನ್ನುತ್ತಿದ್ದೀರಿ. ದೇವೇಗೌಡರನ್ನು ಬಲವಂತವಾಗಿ ತುಮಕೂರಿಗೆ ಕರೆದುಕೊಂಡು ಬಂದು ವಿಷ ಹಾಕಿದ್ರಿ. ಮುಂದೆ 123 ಸೀಟ್ ಗೆಲ್ತೀವಿ ಅಷ್ಟೆ ಅಲ್ಲ ಲೋಕಸಭೆಯಲ್ಲೂ ಬಹುಮತ ತರ್ತೀವಿ. ತುಮಕೂರಿನಲ್ಲಿ 11 ಸ್ಥಾನ ಜನತಾದಳ ಗೆಲ್ಲಲಿದೆ ಎಂದರು. ಇದನ್ನೂ ಓದಿ: ಸೆಂಟ್ ಹಾಕಿಕೊಳ್ಳದೆ ಈಚೆಗೆ ಬರಲ್ಲ ಈ ಗಿರಾಕಿ – ಅಶ್ವತ್ಥ್ ನಾರಾಯಣ್ ವಿರುದ್ಧ ರೇವಣ್ಣ ಕಿಡಿ






 Advertisement 




Sign in to your account
Username or Email Address


Password

 Remember Me


