ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮಾಸ್ಟರ್ ಮೈಂಡ್ ವಾಸೀಂ ಪಠಾಣ್‌ಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.ಹುಬ್ಬಳ್ಳಿಯ ನಾಲ್ಕನೇ ಜೆಎಂಎಫ್‌ಸಿ ಕೋರ್ಟ್ ಏಪ್ರಿಲ್ 30 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ದಿವ್ಯಾ ಹಾಗರಗಿ ವಾರದಲ್ಲಿ ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು – ನ್ಯಾಯಾಲಯ ಆದೇಶವಾಸೀಂ ಪಠಾಣ್‌ ಮತ್ತು ತೌಫೀಲ್ ಮುಲ್ಲಾ ಅವರನ್ನು ಹೆಚ್ಚಿನ ವಿಚಾರಣೆಗೆಂದು ಪೊಲೀಸರು 5 ದಿನಗಳ ಹಿಂದೆ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ಇಂದು ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ‌ ಹಾಜರು ಪಡಿಸಿದ್ದರು.Sign in to your account
Username or Email Address


Password

 Remember Me


