ಮಡಿಕೇರಿ: ಪ್ರವಾಸಕ್ಕೆಂದು ಕುಟುಂಬ ಸದಸ್ಯರೊಂದಿಗೆ ಬಂದ ಬಾಲಕನೋರ್ವ ಕಾವೇರಿ ನದಿಯಲ್ಲಿ ಕಾಲು ಜಾರಿ ಬಿದ್ದು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆ ಪ್ರವಾಸಿತಾಣದಲ್ಲಿ ಇಂದು ನಡೆದಿದೆ.ನಿಖಿತ್ ಮಹಾಜನ್ (17) ಮೃತ ಬಾಲಕ. ಮಹಾರಾಷ್ಟ್ರದ ನಾಸಿಕ್‍ನಿಂದ ಕೊಡಗಿಗೆ 6 ಕುಟುಂಬಗಳ ಒಟ್ಟು 22 ಮಂದಿಯ ತಂಡ ಆಗಮಿಸಿತ್ತು. ಮಧ್ಯಾಹ್ನ ದುಬಾರೆಗೆ ಬಂದಿದ್ದ ಎಲ್ಲರೂ ನೀರಿಗಿಳಿದು ಆಟವಾಡುತ್ತಿದ್ದರು. ಈ ವೇಳೆ ಬಾಲಕ ನದಿಯಲ್ಲಿ ಸ್ನಾನ ಮಾಡಿ ಕಲ್ಲಿನ ಮೇಲೆ ಕುಳಿತುಕೊಳ್ಳುವಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.ಸ್ಥಳದಲ್ಲಿದ್ದ ದುಬಾರೆ ಬೋಟಿಂಗ್ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದು, ಕುಶಾಲನಗರ ಶವಾಗಾರಕ್ಕೆ ರವಾನಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


