ಚಿಕ್ಕಬಳ್ಳಾಪುರ: ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ವಿದ್ಯಾರ್ಥಿಗಳಿಗೆ ಶೀಘ್ರವೇ ಗುಡ್ ನ್ಯೂಸ್ ಸಿಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ಕೊಟ್ಟರು.ಉಕ್ರೇನ್ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ ಅವರು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ. ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್ ಸಿಗುತ್ತೆ. ಈಗಾಗಲೇ ಈ ಕುರಿತು ಕೇಂದ್ರ ಸರ್ಕಾರದ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಈ ಬಗ್ಗೆ ಸಮತಿ ರಚನೆ ಮಾಡಿದ್ದೇವೆ. ಅದಷ್ಟು ಬೇಗ ಶುಭ ಸುದ್ದಿ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ – ಮಾರಾಟ ಮಾಡುವಾಗ ಸಿಕ್ಕಿಬಿದ್ದ ಕೋವಿಡ್-19 ಕುರಿತು ಮಾತನಾಡಿದ ಅವರು, ಏರ್ಪೋರ್ಟ್ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಕೋವಿಡ್ ಹೆಚ್ಚಿರುವ 7-8 ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಗಮನ ಹರಿಸಲು ಸೂಚನೆಯನ್ನು ಕೊಡಲಾಗಿದೆ. ಮನೆಗಳಿಗೆ ಹೋದ ಮೇಲೆ ಟೆಲಿಮಾನಿಟಿರಿಂಗ್ ಮಾಡ್ತಿದ್ದೇವೆ. ಅವಶ್ಯಕತೆ ಇದ್ರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಿದ್ದೇವೆ ಎಂದು ಹೇಳಿದರು.Sign in to your account
Username or Email Address


Password

 Remember Me


