ಶಿವಮೊಗ್ಗ: ನಗರದಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿದ್ದ ಮೂವರು ಅನ್ಯಕೋಮಿನ ಯುವಕರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸಲ್ಮಾನ್, ಅಬ್ಬಾಸ್, ಉಸ್ಮಾನ್ ಬಂಧಿತ ಆರೋಪಿಗಳು. ಯುವಕರು ಹಿಂದೂಪರ ಸಂಘಟಿತ ಕಾರ್ಯಕರ್ತ ಭರತ್ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದರು. ಈ ಮೂವರ ಗುಂಪು ನಗರದ ನ್ಯೂ ಮಂಡ್ಲಿ ಬಡಾವಣೆ ಬಳಿ ಭರತ್ ಸಹೋದರನನ್ನು ಅಡ್ಡ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಭರತ್ ಎಲ್ಲಿದ್ದಾನೆ ಎಂಬುದರ ಬಗ್ಗೆ ಪ್ರಶ್ನಿಸಿದ್ದಾರೆ.ಈ ಕುರಿತು ಭರತ್ ಸಹೋದರ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಯ ಪ್ರವೃತ್ತರಾದ ಪೊಲೀಸರಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಯುವಕರ ತಂಡವು ಈ ಹಿಂದೆ ಸಹ ಹರ್ಷ್‍ನ ಹತ್ಯೆ ಪ್ರತೀಕಾರವಾಗಿ ಅನ್ಯಕೋಮಿನ ಯುವಕನ ಹತ್ಯೆಗೆ ಸಂಚು ರೂಪಿಸಿದ್ದರು. ಪೊಲೀಸರ ಕಾರ್ಯಾಚರಣೆಯಿಂದ ಎರಡು ಹತ್ಯೆಯ ಸಂಚು ವಿಫಲವಾಗಿವೆ.Sign in to your account
Username or Email Address


Password

 Remember Me


